ನಿಮಗೂ ಬೇಲ್ ಸಿಗುತ್ತೆ  ಆತಂಕ ಬೇಡ: ವಿಜಯಲಕ್ಷ್ಮಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.24: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ನಿಮಗೂ ಬೇಲ್ ಸಿಗುತ್ತೆ  ಆತಂಕ ಬೇಡ ಎಂದು ನಟ ದರ್ಶನ್ ಅವರಿಗೆ ಪತ್ನಿ  ವಿಜಯಲಕ್ಷ್ಮಿ ಧೈರ್ಯ ಹೇಳಿದ್ದಾರಂತೆ.
ಅವರು ನಿನ್ನೆ ಇಲ್ಲಿನ ಜೈಲಿಗೆ ಸುಶಾಂತ್ ನಾಯ್ಡು, ಮತ್ತು ಅಳಿಯ ಹೇಮಂತ್ ಜೊತೆ ಆಗಮಿಸಿ, ಎಂದಿನಂತೆ ಎರೆಡು ಬ್ಯಾಗ್ ನಲ್ಲಿ ತಂದಿದ್ದ ಆಹಾರ, ಬಟ್ಟೆಗಳನ್ನು ನೀಡಿ ಮಾತುಕತೆ ನಡೆಸಿದರು.
ನ್ಯಾಯಾಲಯದಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ. ಆದರೆ ಈ ಪ್ರಕರಣದ ಮೂರು ಜನ ಆರೋಪಿಗಳಿಗೆ ಜಾಮೀನು ದೊರೆತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿಮಗೂ ಜಾಮೀನು ದೊರೆಯಲಿದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರಂತೆ.
ಜೈಲಿನ ಅಧಿಕಾರಿಗಳು ಬೆಡ್ ನೀಡದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಂತೆ.
ಇಂದು ದರ್ಶನ್ ಅವರನ್ನು ಅವರ ವಕೀಲರಾದ ಸುನೀಲ್ ಭೇಟಿ ಮಾಡಿ, ಜಾಮೀನು ಅರ್ಜಿ ವಿಚಾರಣೆ ವೇಳೆ ಏನೆಲ್ಲ ವಾದ ಮಂಡಿಸಬಹುದು ಎನ್ನುವುದರ ಬಗ್ಗೆ ದರ್ಶನ್ ಜೊತೆ ಚರ್ಚೆ ಮಾಡಲಿದ್ದಾರಂತೆ