ಬಳ್ಳಾರಿ ಜನತಾ ಬಜಾರ್ ಗೆ 17.70 ಲಕ್ಷ ರೂ ಲಾಭ: ನೀಲಕಂಠಪ್ಪ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.24: ಯಾವುದೇ ಚಟುವಟಿಕೆಗಳಿಲ್ಲದೆ ಸಮಾಪನಕ್ಕೆ ಶಿಫಾರಸ್ಸು ಆಗಿದ್ದ ಇಲ್ಲಿನ ಜನತಾ ಬಜಾರ್ ನಲ್ಲಿ ಈಗ ಅಧ್ಯಕ್ಷ ಜಿ.ನೀಲಕಂಠಪ್ಪ ಮತ್ತವರ ಟೀಂನಿಂದ ಈಗ ಅದು 17 ಲಕ್ಷದ .70 ಸಾವಿರದ .447 ರೂ ನಿವ್ವಳ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದೆ.
ನಿನ್ನೆ ನಗರದ ಬಿಡಿಏಏ ಸಭಾಂಗಣದಲ್ಲಿ Arch ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಜಿ.ನೀಲಕಂಠಪ್ಪ ಲಾಭದ ವಿಷಯವನ್ನು ಪ್ರಕಟಿಸಿದ್ದಾರೆ. ಲಾಭಾಂಶದಲ್ಲಿ ಶೇಕಡ 25ರಷ್ಟನ್ನು ಡಿವಿಂಡೆಂಟ್ ಆಗಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ ಸಂಸ್ಥೆಯ ಖಾಯಂ ಸಿಬ್ಬಂದಿ ಎರಡು ತಿಂಗಳ ವೇತನ ಹಂಗಾಮಿ ನೌಕರರಿಗೆ ಒಂದು ತಿಂಗಳ ವೇತನ ಬೌನಸ್ ನೀಡಲು ನಿರ್ಧರಿಸಿದೆ.
ಇದಕ್ಕೆ ಸಂಸ್ಥೆಯಲ್ಲಿ ಕೈಗೊಂಡ  ವಹಿವಾಟಿನ ಚಟುವಟಿಕೆಗಳು ಕಾರಣವಾಗಿವೆ. ಅನೇಕ ಕಡೆಗಳಿಂದ ಸಾಮಾನುಗಳನ್ನು ತಂದು ಮಾರಾಟ ಮಾಡುತ್ತಿದೆ. ಖರೀದಿ ಪ್ರಕ್ರಿಯೆ ಸಹ ನಡೆದಿದೆ. ಅಲ್ಲದೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರ ಸಹಕಾರವೂ ಕಾರಣ ವಾಗಿದೆಂದಿದ್ದಾರೆ.
ಮುಂದಿನ ವರ್ಷ ಮಿನಿ ವ್ಯಾನ್ ಮೂಲಕ ಆಬ್ ಲೈನ್ ನಲ್ಲಿ ಆರ್ಡ್ ಪಡೆದು ಸರಕು ಸರಬರಾಜು ಮನೆ ಬಾಗಿಲಿಗೆ ಮಾಡುವುದು,
ವಿವಿಧ ಇಲಾಖೆಗಳು, ಹಾಸ್ಟಲ್ ಗಳು ನಡೆಸುವ ಖರೀದಿ ಪ್ರಕ್ರಿಯೆ ಜನತಾ ಬಜಾರ್ ಮೂಲಕ ಮಾಡುವಂತೆ ಡಿಸಿಯವರಿಂದ ಆದೇಶ ಮಾಡಿಸುವುದು. ಸದಸ್ಯರು ಖಡ್ಡಾಯವಾಗಿ ಸಾಮಾಗ್ರಿ ಖರೀದಿ ಮಾಡುವುದು ಸೇರಿದೆಂದು ತಿಳಿಸಿದರು.