ನಾಳೆ “ವಿವೇಕಧಾರಾ’ ಕೃತಿ ಲೋಕಾರ್ಪಣೆ
ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೨೪; ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ಸೆ.೨೫ ರಂದು ಸಂಜೆ ೫ ಕ್ಕೆ ಸ್ವಾಮಿ ವೀರೇಶಾನಂದ ಸರಸ್ವತೀಯವರ “ವಿವೇಕಧಾರಾ’ ಕೃತಿ ಲೋಕಾರ್ಪಣಾ ಸಮಾರಂಭ ನಡೆಯಲಿದೆ.ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀಯವರು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನಾಧರಿಸಿ ಹಲವಾರು ಆಯಾಮಗಳಲ್ಲಿ ಪರಿಚಯಿಸಿದ ವಿಭಿನ್ನ ಲೇಖಗಳ ಗುಚ್ಛವೇ “ವಿವೇಕಧಾರಾ” ಕೃತಿ.  ದಾವಣಗೆರೆಯ ರಾಮಕೃಷ್ಣ ಮಿಷನ್ ನ ಪರಮಪೂಜ್ಯ ಶ್ರೀಮತ್ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್
ಕೃತಿ ಬಿಡುಗಡೆ ಮಾಡಲಿದ್ದಾರೆ.  ಎಸ್.ಎಸ್. ಆಸ್ಪತ್ರೆಉಪ ಪ್ರಾಂಶುಪಾಲರಾದ ಡಾ.ಶಶಿಕಲಾ ಕೃಷ್ಣಮೂರ್ತಿಕೃತಿ ಪರಿಚಯ ಮಾಡಿ ಕೊಡಲಿದ್ದಾರೆ.ವಿಶೇಷ ಆಹ್ವಾನಿತರಾಗಿ   ಸರ್. ಎಂ.ವಿ.ಪಿ.ಯು. ಕಾಲೇಜಿನಕಾರ್ಯದರ್ಶಿಗಳಾದ ಎಸ್.ಜೆ ಶ್ರೀಧರ್,ಬಿ.ಐ.ಇ.ಟಿ. ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಡಾ. ಬಿ.ಟಿ. ಅಚ್ಚುತ್, ಕಸಾಪ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ, ರಾಮಕೃಷ್ಣ ಆಶ್ರಮದ ಭಕ್ತರಾದ‌
ಎನ್.ಎಂ. ಶಾಂತಿನಾಥ್ ಆಗಮಿಸಲಿದ್ದಾರೆ.ಸಮಾರಂಭಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ದಾವಣಗೆರೆ ರಾಮಕೃಷ್ಣ ವಿವೇಕಾನಂದ ಭಕ್ತವೃಂದದವರು ಮನವಿ ಮಾಡಿದ್ದಾರೆ.
.