ಗ್ರಾಮ ಆರೋಗ್ಯ ತರಬೇತಿ
ಸಂಜೆವಾಣಿ ವಾರ್ತೆ
ಕುರುಗೋಡು, ಸೆ.24: ಪಟ್ಟಣ ಸಮೀಪದ  ಏರಂಗ್ಲಿ.ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಿಪಂ., ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ ಜರುಗಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಘವಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ಕೊರತೆಯಿಂದ ಸಾಂಕ್ರಮಿಗಳ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆಗಳಿರುತ್ತವೆ. ಇನ್ನೂ ಆರೋಗ್ಯ ಮಾಹಿತಿ ಇಲ್ಲದೆ ಆಸಾಂಕ್ರಮಿಕ ರೋಗಗಳು ಕಾಣ ಸಿಕೊಳ್ಳುತ್ತವೆ. ಹಾಗಾಗಿ ಪ್ರತಿಯೊಬ್ಬರು ನಮ್ಮ ಪರಿಸರ, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ಇನ್ನೂ ಉಚಿತ ಆರೋಗ್ಯ ತಪಸಾಣೆ ಶಿಬಿರಗಳನ್ನಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಪಾಲ್ಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ಕುರಿತು, ಬಾಲ್ಯ ವಿವಾಹ, ಪೋಕ್ಸ್ ಕಾಯ್ದೆ, ರಕ್ತ ಹೀನತೆ, ಮುಟ್ಟಿನ ನೈರ್ಮಲ್ಯತೆ ಹಾಗೂ ಪೌಷ್ಠಿಕ ಆಹಾರದ ಕುರಿತು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಿ ಜನರ ಆರೋಗ್ಯ ಕಾಪಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.
ನಂತರ ಆರೋಗ್ಯದ ಕುರಿತು ತರಬೇತಿ ನೀಡಿ, ಗ್ರಾಪಂ. ವತಿಯಿಂದ ಕ್ರಿಯಾ ಯೋಜನೆ ರಚಿಸಿ, ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ. ಸದಸ್ಯರು. ಶ್ರೀಮತಿ ಜ್ಯೋತಿ ಅಂಗನವಾಡಿ ಬಸವರಾಜ್ ತಾಲೂಕ್ ಪಂಚಾಯತ್ ಕುರುಗೋಡು. ಜಯಣ್ಣ. ಎಚ್ಐಒ. ಶ್ರೀಮತಿ ಜಯಶ್ರೀ. ಪಿ ಎಚ್ ಸಿ ಓ ಗ್ರಾಮ ಪಂಚಾಯತಿ ಸದಸ್ಯರು. ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು. ಹಾಗೂ ವಿವದ ಸಂಘದ ಸದಸ್ಯರು ಹಾಜರಿದ್ದರು.