ನ.02 ಗಡಗಿ ಚೆನ್ನಪ್ಪ ಸರ್ಕಲ್‌ಹೊಸ ಕ್ಲಾಕ್ ಟವರ್ ಉದ್ಘಾಟನೆ:  ಭರತ್ ರೆಡ್ಡಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.05: ನಗರ್  ಗಡಿಗಿ ಚನ್ನಪ್ಪ ವೃತ್ತದ ಹೊಸ ಕ್ಲಾಕ್ ಟವರ್ ನ್ನು ನ.02 ರಂದು ಸಂಜೆ ಉದ್ಘಾಟನೆ ಮಾಡಲಿದೆಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಹುಕೋಟಿ ವೆಚ್ಚದ  ಈ ಕ್ಲಾಕ್ ಟವರ್ ಹಾಗೂ ಗಡಿಗಿ ಚನ್ನಪ್ಪ ವೃತ್ತದಿಂದ ಇಂದಿರಾ  ಸರ್ಕಲ್ ವರೆಗಿನ ರಸ್ತೆ ಕಾಮಗಾರಿಯನ್ನು ಸಹ  ಲೋಕಾರ್ಪಣೆಗೊಳಿಸಲಾಗುವುದು.
ಅಂದು ಸಂಜೆ ಉದ್ಘಾಟನಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುವ ಚಿಂತನೆ ನಡೆದಿದೆ ಎಂದಿದ್ದಾರೆ.