ಪ್ರವಾಸಿ ಮಾರ್ಗದರ್ಶಿ ತರಬೇತಿ ಯಶಸ್ವಿ: ಪ್ರಮಾಣ ಪತ್ರ ವಿತರಣೆ
ಕಲಬುರಗಿ,ಅ.೫- ಪ್ರವಾಸೋದ್ಯಮ ಪರೀಕ್ಷೆ ಮತ್ತು ಪ್ರವಾಸಿ ಮಾರ್ಗದರ್ಶಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಕಲಬುರಗಿ ನಗರದಲ್ಲಿ ಸುಮಾರು ೪೫ ಜನ ಪ್ರವಾಸಿಗರು ಪಧವಿಧರರಾಗಿದ್ದು, ಅವರು ೨೦೨೩-೨೪ನೇ ಸಾಲಿನಲ್ಲಿ ಪ್ರದೇಶ ಕಲ್ಯಾಣ ಕರ್ನಾಟಕ ಅನುದಾನದ ಅಡಿಯಲ್ಲಿ ಮತ್ತು ಅಭಿವೃದ್ಧಿ ಮಂಡಳಿ ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸರ್ಕಾರ ಕಲಬುರಗಿ ಸಹಯೋಗದೊಂದಿಗೆ ಶರಣಬಸವ ಕಲಬುರಗಿಯ ಪ್ರವಾಸೋದ್ಯಮ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ.
ಕಳೆದ ದಿನಾಂಕ: ೧೮/೦೭/೨೦೨೩ ರಿಂದ ೦೮/೦೯/೨೦೨೩ ರ ವರೆಗೆ ಜರುಗಿದ ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿಯಿತು.
ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಕಲಬುರಗಿ, ಉಪ ಕುಲಪತಿಗಳು ಶಣಬಸವ ವಿಶ್ವವಿದ್ಯಾಲಯ ಕಲಬುರಗಿ, ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಕಲಬುರಗಿ ವತಿಯಿಂದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು ಎಂದು ಪತ್ರಿಕೋದ್ಯಮ ಸಮೂಹ ಸಂವಾಹನ ಸ್ನಾತಕೊತ್ತರ ಪಧವಿಧರಾದ ಲಕ್ಷಿö್ಮÃಕಾಂತ ಆರ್.ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.