ಬಿಡಿಸಿಸಿಐ : ಯಶವಂತರಾಜ್ ನಾಗಿರೆಡ್ಡಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ. 05: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಯಶವಂತರಾಜ್ ನಾಗಿರೆಡ್ಡಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದು, ಪ್ರಭಾರಿ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಈವರೆಗೆ ಅಧ್ಯಕ್ಷರಾಗಿದ್ದ ಬಿ. ಮಹಾರುದ್ರಗೌಡ ಅವರು, ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹೊಸಬರಿಗೆ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹಸ್ತಾಂತರ ಮಾಡುತ್ತಿರುವುದಾಗಿ ತಿಳಿಸಿದರು.
ಗೌರವ ಕಾರ್ಯದರ್ಶಿಗಳಾಗಿ ಕೆ.ಸಿ. ಸುರೇಶಬಾಬು, ಹಿರಿಯ ಉಪಾಧ್ಯಕ್ಷರಾಗಿ ಅವ್ವಾರು ಮಂಜುನಾಥ್, ಉಪಾಧ್ಯಕ್ಷರಾಗಿ ಎಸ್. ದೊಡ್ಡನಗೌಡ, ಗಿರಿಧರ ಸೊಂತಾ, ಜಂಟಿ ಕಾರ್ಯದರ್ಶಿಗಳಾಗಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಮತ್ತು ವಿ. ರಾಮಚಂದ್ರ, ಖಜಾಂಚಿಗಳಾಗಿ ಪಿ. ಪಾಲಣ್ಣ ಅವರು ಮುಂದವರೆದಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾದ ಬಿ. ಮಹಾರುದ್ರಗೌಡ, ಸಿ. ಶ್ರೀನಿವಾಸರಾವ್, ನಾಗಳ್ಳಿ ರಮೇಶ್, ಟಿ. ಶ್ರೀನಿವಾಸರಾವ್ (ವಾಸು), ಸಿ.ಎಸ್. ಸತ್ಯನಾರಾಯಣ, ಜೆ. ರಾಜೇಶ್, ನೇಕಾರ  ನಾಗರಾಜ್, ತಾಟಕೂರಿ ಶ್ರೀನಿವಾಸರಾವ್, ಪಿ. ಗಿರೀಶ್, ಎಸ್. ಜಿತೇಂದ್ರ ಪ್ರಸಾದ್, ಬಿ. ಸತ್ಯಬಾಬು, ಯು. ಗೋವಿಂದರೆಡ್ಡಿ, ಸಿಎ ಕೆ. ರಾಜಶೇಖರ್, ವಿ. ವೆಂಕಟೇಶಲು, ಎಚ್. ರಾಜೇಶ್ ಕುಮಾರ್, ಎಸ್.ಪಿ. ವೆಂಕಟೇಶ್, ವಿ.ಕೆ.ಎಲ್. ದೀಪಕ್, ಆರ್. ನಾಗರಾಜ್, ಪಿ. ವೇಣುಗೋಪಾಲ್ ಗುಪ್ತ, ಜಿ. ರಾಘವೇಂದ್ರ ರೆಡ್ಡಿ, ಬಿ. ನಾಗರಾಜ್ ಮತ್ತು ಕೆ. ಗೋಪಾಲರೆಡ್ಡಿ ಅವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಂದುವರೆದಿದ್ದಾರೆ.