ಮಾಹಿತಿ ಕಾರ್ಯಗಾರ
ಧಾರವಾಡ, ಅ5: 70 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ದಿನಾಂಕ: 04-10-2024 ರಂದುಅರಣ್ಯಇಲಾಖೆಯ ಮಂಚೂಣಿ ಸಿಬ್ಬಂದಿಗಳಿಗೆ ಹಾಗೂ ಧಾರವಾಡಜಿಲ್ಲೆಯಲ್ಲಿರುವಉರಗ ಸಂರಕ್ಷಕರಿಗೆ ಮಾನವ-ಹಾವುಗಳ ಸಂಘರ್ಷ ನಿರ್ವಹಣೆ ಮತ್ತು ಉಪಶಮನ ಕುರಿತು ಮೂರ್ತಿಟ್ರಸ್ಟ್ ವನಭವನ, ಅರಣ್ಯ ಸಂಕೀರ್ಣಧಾರವಾಡದಲ್ಲಿತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಸದರಿಕಾರ್ಯಗಾರವನ್ನು ಕು.ವೈಶಾಲಿ ಕುಲಕರ್ಣಿ, ಸದಸ್ಯರುಕರ್ನಾಟಕ ವನ್ಯಜೀವಿ ಮಂಡಳಿ ಇವರು ಉದ್ಘಾಟಿಸಿ, ಇತ್ತಿಚಿಗೆ ನಗರ ವಿಸ್ತರಣೆಯುಅಧೀಕ ಮಟ್ಟದಲ್ಲಿರುವುದರಿಂದ ಹಾವುಗಳು ಮತ್ತು ಮನುಷ್ಯರು ಪರಸ್ಪರ ಮುಖಾ-ಮುಖಿಯಾಗುವ ಘಟನೆಗಳು ಆಗಾಗ ಕಂಡು ಬರುತ್ತಿದ್ದು, ಅರಣ್ಯಇಲಾಖೆಯ ಮಂಚೂಣಿಸಿಬ್ಬಂದಿಗಳಿಗೆ ಹಾಗೂ ಧಾರವಾಡಜಿಲ್ಲೆಯಲ್ಲಿರುವಉರಗ ಸಂರಕ್ಷಕರಿಗೆ ಮಾನವ-ಹಾವುಗಳ ಸಂಘರ್ಷ ನಿರ್ವಹಣೆ ಮತ್ತು ಉಪಶಮನ ಕುರಿತು ಮಾಹಿತಿ/ ತರಬೇತಿಯಅವಶ್ಯಕತೆಇದ್ದು, ಸದರಿಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದರು.