ಎನ್‍ಎಸ್‍ಎಸ್ ಶಿಬಿರ
ಹುಬ್ಬಳ್ಳಿ, ಅ 5: ಕಂಪ್ಲಿಕೊಪ್ಪದಲ್ಲಿ ಸಿಆಯ್‍ಸಿ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡ ಏಳು ದಿನಗಳ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷರಾದ ಎಸ್.ಐ. ಚಿಕ್ಕನಗೌಡ್ರ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಿಐಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 79 ಜನ ಸಿಬ್ಬಂದಿಗಳು ಹಾಗೂ 2400 ವಿದ್ಯಾರ್ಥಿಗಳನ್ನು ಹೊಂದಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇವರೇ ನನ್ನ ಜೀವನದ ಎರಡು ಆಸ್ತಿಗಳು ಎಂದು ನುಡಿದರು. ಎನ್‍ಎಸ್‍ಎಸ್ ಶಿಬಿರವನ್ನು ಈ ಬಾರಿ ಕಂಪ್ಲಿಕೊಪ್ಪದಲ್ಲಿ ಏರ್ಪಡಿಸಿದ್ದು ಇನ್ನೂ ಹೆಮ್ಮೆ ಎಂದು ಹೇಳಿದರು.
ಎನ್‍ಎಸ್‍ಎಸ್ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ್ದೆ ಆದರೆ ಈ ಗ್ರಾಮದಲ್ಲಿ ಏರ್ಪಡಿಸಿದ ಏಳು ದಿನಗಳ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರ ಯಶಸ್ವಿಯಾಗಲು ಸಂದೇಹವಿಲ್ಲ ಎಂದು ಸಿಆಯ್‍ಸಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹೆಚ್.ಯು. ಮಜಿತನವರ ಹೇಳಿದರು.
ಸಿಐಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಫ್. ಭರಮಗೌಡ್ರ ಅವರು ಮಾತನಾಡುತ್ತಾ ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳುವಂಥ ಮಕ್ಕಳು ನೀವಾಗಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ಗ್ರಾಮಸ್ಥರು, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಆರ್.ಎಂ. ಅಳಗವಾಡಿ ಸ್ವಯಂ ಸೇವಕ ಸೇವಕಿಯರು ಉಪಸ್ಥಿತರಿದ್ದರು. ಕುಮಾರಿ ಅನುಷಾ ಕಾರ್ಯಕ್ರಮವನ್ನು ನಿರೂಪಿಸಿದಳು.