ಡಾ ಕೈಲಾಸನಾಥ ಶ್ರೀಗಳಿಗೆ ಮಹಾನ್ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ “ಸಮ್ಮಾನ ಪ್ರಶಸ್ತಿ
ಕೊಲ್ಹಾರ: ಮೇ.30:ಬೆಂಗಳೂರಿನ ಅಖಿಲ ಭಾರತ ಭಾವೈಕ್ಯತಾ ಸೇವಾ ಟ್ರಸ್ಟ್ (ರಿ) ಇವರು ಕೊಡ ಮಾಡುವ ರಾಷ್ಟ್ರೀಯ ಪ್ರಶಸ್ತಿ ,ಕೊಲ್ಹಾರ ಪಟ್ಟಣದ ಶ್ರೀ ಘ ಮ ಪೂ ಧರ್ಮರತ್ನ ಡಾ ಕೈಲಾಸನಾಥ ಮಹಾ ಸ್ವಾಮಿಗಳು ಶೀಲವಂತ ಹಿರೇಮಠ ಪೂಜ್ಯರಿಗೆ “ಮಹಾನ್ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ “ಸಮ್ಮಾನ ಪ್ರಶಸ್ತಿ ಲಭಿಸಿದೆ, ಪೂಜ್ಯರು ರಾಷ್ಟ್ರಾಭಿಮಾನ, ಧರ್ಮಾಭೀಮಾನ,ಮತ್ತು ನಾಡಿನ ನೆಲ ಜಲ ಭಾಷಾಭಿಮಾನ ಹೆಚ್ಚಿಸಲು ನಿರಂತರ ತಮ್ಮನ್ನು ತಾವು ತೊಡಗಿಸಿಕೊಂಡು ಧಾರ್ಮಿಕ ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಪ್ರಧಾನ ಸಮೀತಿಯ ಅಧ್ಯಕ್ಷರಾದ ಶ್ರೀ ಸುಜ್ಞಾನ ಸಿಂಗ್, ಕಾರ್ಯಧರ್ಶಿಗಳಾದ ಅಮರ್ನಾಥ್ ದೇಶಪಾಂಡೆ, ಅವಿನಾಶ್ ಪಾಟೀಲ, ಅಬುಜಾಕ್ಷಿ ಕುಲಕರ್ಣಿ, ಆನಂದರಾವ್ ಮೇಲ್ಮನಿ,ಪ್ರಭಾಗೌಡ ಗೌಡರ,ತಿಳಿಸಿದ್ದಾರೆ ಎಂದು ಕೈಲಾಸನಾಥ ಶ್ರೀಗಳು ಹೇಳಿದರು, ಈಗಾಗಲೇ ಪೂಜ್ಯರಿಗೆ ಬಸವಜ್ಞಾನ ಪ್ರವಚಣ ಭಾಸ್ಕರ, ಕನಾರ್ಟಕ ಯುವಕೇಸರಿ ಪ್ರಶಸ್ತಿ, ಹಾನಗಲ್ ಗುರು ಕುಮಾರೇಶ್ವರ ರಾಷ್ಟ್ರೀಯ ಪ್ರಶಸ್ತಿ, ಪಂಡಿತ್ ಪಂಚಾಕ್ಷರಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ, ಜ್ಞಾನ ದಾಸೋಹ ರತ್ನ, ಆರೂಡ ಜ್ಯೋತಿ, ಚಿನ್ಮಯ ಜ್ಞಾನಿ, ಇಂಡಿಯನ್ ಆಯ್ಕಾನ್ ಆವಾರ್ಡ, ಹೀಗೆ ಹತ್ತು ಹಲವಾರು ಪುರಸ್ಕಾರ ಪ್ರಶಸ್ತಿಗಳು ಲಭಿಸಿವೆ ಇತ್ತೀಚೆಗೆ ದೇಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಿಂದ ಡಾಕ್ಟರ್ ರೇಟ್ ಆವಾರ್ಡ ದೊರೆತಿದೆ,