ಡಾ.ಎಂ.ಡಿ ಮಿಣಜಗಿ ಗೃಹ ಸನ್ಮಾನ
ಕಲಬುರಗಿ,ಮೇ 30: ನವ ಕಲ್ಯಾಣ ಕರ್ನಾಟಕ ಛಾಯಾಗ್ರಾಹಕ ಸೇವಾ ಸಂಘ ಮತ್ತು ನೇಕಾರ ಬಳಗದ ವತಿಯಿಂದ ಹವ್ಯಾಸಿ ಕಲಾವಿದ ಡಾ.ಎಂ.ಡಿ. ಮಿಣಜಗಿ ದಂಪತಿಗಳಿಗೆ ಗೃಹ ಸನ್ಮಾನ ನೀಡಲಾಯಿತು.
ಸಂಘದ ಅಧ್ಯಕ್ಷ ಆನಂದ ನಾರೋಣಿ,ಕಾರ್ಯದರ್ಶಿ ರಾಜು ಕೋಷ್ಟಿ, ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ,ಛಾಯಾಗ್ರಾಹಕ ನಾರಾಯಣ ಜೋಷಿ, ಜಿಲ್ಲಾ ನೇಕಾರ ಪಟ್ಟಸಾಲಿ ಸಮಾಜದ ಹಿರಿಯ ಸುಭಾಷ್ ಪ್ಯಾಟಿ, ಉದ್ಯಮಿ ಮಲ್ಲಿನಾಥ ಬಡ್ದುರ, ಜಿಲ್ಲಾ ನೇಕಾರ ತೊಗಟವೀರ ಸಮಾಜದ ಶ್ರೀನಿವಾಸ ಬಲಪೂರ, ಜಿಲ್ಲಾ ನೇಕಾರ ಹಟಗಾರ ಸಮಾಜ ಸಂಚಾಲಕ ನ್ಯಾಯವಾದಿ ಜೇನವೆರಿ ವಿನೋದ ಕುಮಾರ, ಚಂದ್ರಕಾಂತ ನಾಗನಹಳ್ಳಿ, ಚಿ. ಶರಣ ಪ್ರಸಾದ್ ಜೇನವೆರಿ ಹಾಗೂ ಇತರರು ಉಪಸ್ಥಿತರಿದ್ದರು .