ಪಾಳಾದಲ್ಲಿ ಪುರಾಣಪ್ರವಚನ ಉದ್ಘಾಟನೆ
ಕಲಬುರಗಿ,ಮೇ 30: ಪಾಳಾ ಕಟ್ಟಿಮನಿ ಹಿರೇಮಠದಲ್ಲಿ ಗುರು ಮಳೇಂದ್ರಶಿವಾಚಾರ್ಯರ ಪುಣ್ಯಸ್ಮರಣೋತ್ಸವ ನಿಮಿತ್ಯ
ಹಮ್ಮಿಕೊಂಡ ಅಜಾತ ಶತ್ರು ನಾಗಲಿಂಗ ಶರಣರ ಪುರಾಣ ಪ್ರವಚನವನ್ನು ಪಾಳಾ ಕಟ್ಟಿಮನಿ ಹಿರೇಮಠದ ಗುರುಮೂರ್ತಿ ಶಿವಾಚಾರ್ಯರು,ವೀರಭದ್ರ ಶಿವಾಚಾರ್ಯರು ಮತ್ತು ಬೆಳಗುಂಪ ಹಿರೇಮಠದ ಅಭಿನವ ಪರಂತೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು.
ಮೇ.28 ರಿಂದ ಆರಂಭವಾದ ಪುರಾಣವು ಜೂನ್ 7ರವರೆಗೆ ಪ್ರತಿನಿತ್ಯ ರಾತ್ರಿ 8.ರಿಂದ 10.30ವರೆಗೆ ನಡೆಯಲಿದೆ.
ಪಂ.ಮಡಿವಾಳಯ್ಯ ಶಾಸ್ತ್ರಿಗಳು ಜೇರಟಗಿ ಪುರಾಣ ಪ್ರವಚನ ನಡೆಸಿಕೊಡುವರು.ಯಶವಂತರಾವ್ ಬಡಿಗೇರ ಸಂಗೀತ ಮತ್ತು ರಾಜಶೇಖರ ಕಟ್ಟಿ ಸಂಗಾವಿ ತಬಲಾ ಸಾಥ್ ನೀಡುವರು ಎಂದು ಕಲಬುರಗಿ ವಿಶ್ವರಾಧ್ಯ ಸೇವಾ ಸಮಿತಿಯ ನಗರ ಘಟಕದ ವಕ್ತಾರ ಹಾಗೂ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗಿ ತಿಳಿಸಿದ್ದಾರೆ.