ಕಾಲೇಜು ಫೆಸ್ಟ್ ಹಲ್ಲೆ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಬೀದರ,ಮೇ 30: ನಗರದ ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜು ಫೆಸ್ಟ್ ಸಂದರ್ಭದಲ್ಲಿ ಜೈ ಶ್ರೀರಾಮ್ ಹಾಡಿಗೆ ನೃತ್ಯ ಮಾಡಿದವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದು ಅಲ್ಲಿ ನಡೆದ ಮೂರನೆ ಘಟನೆಯಾಗಿದೆ ಈ ಎಲ್ಲ ಘಟನೆಗಳ ಬಗ್ಗೆ ಪೆÇಲೀಸರಿಗೆ ತಿಳಿದಿದ್ದು ಆದರೂ ಕಠಿಣ ಕ್ರಮ ಕೈಗೊಂಡಿಲ್ಲ.ಈ ಘಟನೆಗೆ ರಾಜಕೀಯದ ಲೇಪನ ಮಾಡತ್ತಿರುವುದು ಖಂಡನೀಯ.ಘಟನೆಯಾದಾಗ ಹಲ್ಲೆ ಮಾಡಿದವರ ಮೇಲೆ ಪ್ರತಿಯಾಗಿ ಯಾವುದೆ ಹಲ್ಲೆಗಳಾಗಿರಲಿಲ್ಲ. ಇದೆಲ್ಲ ಕಾಲೇಜಿನ ಆವರಣದಲ್ಲಿನ ಸಿಸಿಟಿವಿ ವಿಡಿಯೋಗಳಲ್ಲಿದೆ ಮತ್ತು ಅನೇಕ ವಿದ್ಯಾರ್ಥಿಗಳು ಕೂಡ ತಮ್ಮ ಮೋಬೈಲನಲ್ಲಿ ಘಟನೆಯ ವಿಡಿಯೊ ಚಿತ್ರಿಕರಿಸಿದ್ದಾರೆ. ಅದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಮಧ್ಯಾಹ್ನ ನಡೆದ ಘಟನೆಯಲ್ಲಿ ಹಲ್ಲೆಯಾಗಿದ್ದು ಪೆÇಲೀಸರು ಕೂಡ ನೋಡಿದ್ದಾರೆ.ರಾತ್ರಿ ವೇಳೆ ಪೆÇಲೀಸ್ ಸ್ಟೇಷನ್ ಬಂದು ಹಲ್ಲೆ ಮಾಡಿದವರೆ ಬಂದು ನಮ್ಮ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಎಲ್ಲ ಗೊತ್ತಿದ್ದ ಪೆÇಲೀಸರು ಪ್ರಕರಣ ಹೇಗೆ ದಾಖಲಿಸಿಕೊಂಡರು ? ಯಾರ ಒತ್ತಡದಿಂದ ಎಂಬ ಅನುಮಾನ ಮೂಡುತ್ತಿದೆ ? ಜಿಎನಡಿ ಕಾಲೇಜಿನಲ್ಲಿ ನಡೆದ ಘಟನೆಯ ಬಗ್ಗೆ ಎರಡು ದಿನದ ಒಳಗೆ ತಪ್ಪಿಸ್ಥರನ್ನು ಬಂದಿಸಬೇಕು. ಮತ್ತೊಮ್ಮೆ ಘಟನೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರಲ್ಲದವರ ವಿರುದ್ಧ ದಾಖಲಾದ ಪ್ರಕರಣವನ್ನ ತಕ್ಷಣವೆ ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಶಿಕಾಂತ್, ಶಶಿ ಹೊಸಹಳ್ಳಿ, ರೇವಣ ಸಿದ್ದಪ್ಪ ಜಲದೇ, ಗುರುನಾಥ್ ರಾಜಗಿರ, ಭೀಮಣ್ಣ ಸುರಳ್ಳಿ ಅಂಬರೀಶ ಅಮರ್ ನಾಗರಾಜ್ ಪವನ್ ನಟರಾಜ್ ರಾಜ್ ಸಾಯಿನಾಥ್ ಸೇರಿದಂತೆ ಹಿಂದು ಮುಖಂಡರು, ಸಾವಿರಾರು ವಿದ್ಯಾರ್ಥಿಗಳು ಇದ್ದರು.