ಬಿತ್ತನೆ ಬೀಜ ವಿತರಣೆ ಕಾರ್ಯಕ್ಕೆ ಚಾಲನೆ
ತಾಳಿಕೋಟೆ:ಮೇ.30: 2024-25ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಮಹೇಶ ಜೋಶಿ ಅವರು ಬುಧವಾರರಂದು ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಅಧಿಕಾರಿ ಮಹೇಶ ಜೋಶಿ ಅವರು ತಾಳಿಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ 75-3ಆರ್, ಜಿಆರ್‍ಯು-152 ತೊಗರಿ ಬೀಜಗಳು ಲಭ್ಯವಿದ್ದು ಅದನ್ನು ವಿತರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದ ಅವರು ರೈತರು ಎಫ್‍ಆಯ್‍ಡಿ ಸಂಖ್ಯೆ, ಆಧಾರ ಕಾರ್ಡ ಝರಾಕ್ಸ, ಫಹಣಿ ದಾಖಲೆಗಳನ್ನು ತೊರಿಸಿ ಬೀಜಗಳನ್ನು ಪಡೆದುಕೊಳ್ಳಬೇಕು ತೊಗರಿ ಬೀಜ ಬಿಜೋಪಾಚಾರಕ್ಕೆ ಟ್ರೈಕೋಡರ್ಮಾ 1 ಕೆಜಿ ಬೀಜಕ್ಕೆ 4 ರಿಂದ 5ಗ್ರಾಂ ಪೌಡರ್‍ನ್ನು ಹಚ್ಚಿ ಬೀಜೋಪಾಚಾರ ಮಾಡಿಕೊಳ್ಳಬೇಕು ಮುಂದಿನ ವಾರದಿಂದ ಸಜ್ಜೆ, ಮೆಕ್ಕೆ ಜೋಳ ಬೀಜಗಳು ಆಗಮಿಸುತ್ತಿದ್ದು ಅವುಗಳನ್ನು ವಿತರಿಸುವ ಕಾರ್ಯ ಮಾಡಲಾಗುವದೆಂದರು.
ಈ ಸಮಯದಲ್ಲಿ ಕೃಷಿ ಅಧಿಕಾರಿಗಳಾದ ಎಂ.ಎಚ್.ಬಿಳಗಿ, ತಾಂತ್ರಿಕ ಅಧಿಕಾರಿ ಸಂಗಮೇಶ ಪಾಟೀಲ, ಲೆಕ್ಕಿಗ ವಿನೋದ ನಾಯಕ, ಕೃಷಿ ಸಂಜೀವಿನಿ ಸಿಬ್ಬಂದಿ ಕಿರಣ ಬೊಮ್ಮನಹಳ್ಳಿ, ಹಣಮಂತ್ರಾಯ ಕುಂಟರಡ್ಡಿ, ರೈತ ಅನುವುಗಾರರಾದ ಅಮರೇಶ ಅಂಗಡಿ, ನಂದಿಕೋಲಮಠ, ರವಿ ಹೊಸಮನಿ, ರಾಘವೇಂದ್ರ ಕಟ್ಟಿಮನಿ ಹಾಗೂ ರೈತಾಪಿ ಜನರು ಉಪಸ್ಥಿತರಿದ್ದರು.