446.24 ಗ್ರಾಂ.ಬಂಗಾರ, 4.30 ಲಕ್ಷ ರೂ. ನಗದು ಕಳವು
ತಾಳಿಕೋಟೆ:ಮೇ.30: ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಅಮೃತಾ ಜ್ಯೂಲೇರ್ಸ್ ಅಂಗಡಿಯ ಕೀಲಿ ಮುರಿದು ಸುಮಾರು 446.24 ಗ್ರಾಂ ಬಂಗಾರ ಮತ್ತು 4 ಲಕ್ಷ 30 ಸಾವಿರ ನಗದು ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಶಿವಕುಮಾರ ಬಸಣ್ಣ ಕುಂಬಾರ(ಬಾವೂರ) ಎಂಬವರಿಗೆ ಸೇರಿದ ಅಮೃತಾ ಜ್ಯೂಲೇರ್ಸ್ ಬಂಗಾರ ಅಂಗಡಿಯಾಗಿದ್ದು ಮಾಲಿಕ ಶಿವಕುಮಾರ ಅವರು ದಿನಾಂಕ: 21/05/2024 ರಂದು ಪ್ರತಿ ದಿನದಂತೆ ವ್ಯಾಪಾರ ಮಾಡಿ ಅಂಗಡಿಯಲ್ಲಿ ಬಂಗಾರದ ಸಾಮಾನುಗಳನ್ನು ಮತ್ತು ವ್ಯಾಪಾರದಿಂದ ಬಂದಂತಹ 4,30,000/- ರೂಗಳನ್ನು ಡ್ರಾದಲ್ಲಿ ಇಟ್ಟು ಅಂಗಡಿಯನ್ನು ಸಾಯಂಕಾಲ 06-00 ಗಂಟೆಗೆ ಬಂದ ಮಾಡಿಕೊಂಡು ಆಸ್ಪತ್ರೆಗೆ ಹೋಗಿ ಉಪಚರಿಸಿಕೊಂಡು ಮನೆಗೆ ಹೋಗಿ ಮರುದಿನ ದಿ.22 ರಂದು ಬೆಳಿಗ್ಗೆ 09-00 ಗಂಟೆಗೆ ಮತ್ತು ಪತ್ನಿ ಜಯಶ್ರೀ ಮಕ್ಕಳಾದ ಮನೋಜ್ ಮತ್ತು ಮನೀತ್ ಎಲ್ಲರೂ ಕೂಡಿಕೊಂಡು ಪ್ರವಾಸಕ್ಕೆ ಅಂತಾ ದಾಂಡೇಲಿಗೆ ಹೋಗಿ ಅಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದು ಮರುದಿನ ದಿ.23 ರಂದು ದಾಂಡೇಲಿಯಲ್ಲಿದ್ದಾಗ ಬೆಳಗಿನ 06-30 ಗಂಟೆಯ ಸುಮಾರಿಗೆ ಶಿವಕುಮಾರನ ಪತ್ನಿಯ ಅಪ್ಪನಾದ ಚಿದಾನಂದ ತಂ ಶಂಕ್ರೆಪ್ಪ ಬಡಿಗೇರ ಸಾ|| ಈವಣಗಿ ಇವರು ಫೆÇೀನ್ ಮಾಡಿ ನನ್ನ ಮಗ ನೀಲಕಂಠ ತೀರಿಕೊಂಡಿರುತ್ತಾನೆ ಅಂತಾ ಹೇಳಿದಾಗ ದಾಂಡೇಲಿಯಿಂದ ನೇರವಾಗಿ ಈವಣಗಿ ಗ್ರಾಮಕ್ಕೆ ಮದ್ಯಾಹ್ನ 12-00 ಗಂಟೆಗೆ ಹೋಗಿ ಅಳಿಯನ ಅಂತ್ಯ ಸಂಸ್ಕಾರ ಮಾಡಿ ಅಲ್ಲಿಯೇ ವಾಸ್ತವ್ಯ ಮಾಡಿದ್ದಾರೆ ದಿ. 26 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಮಲ್ಲನಗೌಡ ಬಿರಾದಾರ ಎಂಬವರು ಶಿವಕುಮಾರನಿಗೆ ಫೆÇೀನ್ ಮಾಡಿ ನಿಮ್ಮ ಬಂಗಾರದ ಅಂಗಡಿಯ ಒಳಗಡೆಯ ಬಾಗಿಲು ಮುರಿದು ಕಳುವು ಮಾಡಿದಂತೆ ಕಂಡು ಬರುತ್ತಿದೆ ಬಂದು ನೋಡ್ರಿ ಅಂತಾ ಹೇಳಿದಾಗ ಶಿವಕುಮಾರ ಮತ್ತು ಅಳಿಯ ಅಳಿಯ ವಿರೇಶ ತಂ ಚಿದಾನಂದ ಬಡಿಗೇರ ಸಾ|| ಈವಣಗಿ ಇಬ್ಬರೂ ಕೂಡಿ ಈವಣಗಿಯಿಂದ ಮದ್ಯಾಹ್ನ 12-00 ಗಂಟೆಗೆ ತಾಳಿಕೋಟಿಗೆ ಬಂದು ಒಳಗಿನ ಬಾಗಿಲು ನೋಡಿದಾಗ ಯಾವುದೋ ವಸ್ತುವಿನಿಂದ ಮೀಟಿ ಬಾಗಿಲನ್ನು ಮುರಿದು ಒಳಗಡೆ ಹೋಗಿ ಡ್ರಾದಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಮತ್ತು ಡ್ರಾನಲ್ಲಿ ಇಟ್ಟಿದ್ದ 4 ಲಕ್ಷ 30 ಸಾವಿರ ನಗದು ದೋಚಿಕೊಂಡು ಹೋಗಿದ್ದಾರೆಂದು ಶಿವಕುಮಾರ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಂಗಾರದ ಆಭರಣಗಳಾದ 01) 40.450 ಗ್ರಾಂ ಮಿಕ್ಸ್ ಐಟೆಮ್ಸ್‍ಗಳು, 02) 14.770 ಗ್ರಾಂ ನೆಕ್ಲೇಸ್ ಒಂದು, 03) 12.780 ಗ್ರಾಂ ನೆಕ್ಲೇಸ್ ಒಂದು, 04) 10.00 ಗ್ರಾಂ ಗಟ್ಟಿ ಗುಂಡುಗಳು, 05) 10.00 ಗ್ರಾಂ ದ ಕಿವಿಯಲ್ಲಿ ಹಾಕಿಕೊಳ್ಳವ ಉಂಗುರುಗಳು ಮತ್ತು ಟಾಪ್ಸ್ ಗಳು, 06) 18.860 ಗ್ರಾಂ ಕಿವಿಯ ರಿಂಗಗಳು, 07) 51.380 ಗ್ರಾಂ ಕಿವಿಯೋಲೆಗಳು, 08) 22.800 ಗ್ರಾಂ ಸೈಡ್ ರಿಂಗ್ ಮುಕರ್‍ಂಗಳು, 09) 20.00 ಗ್ರಾಂ ಕಿವಿಯಲ್ಲಿಯ ಚೈನ್ ಮತ್ತು ಮಾಟೀಲಗಳು, 10) 16.00 ಗ್ರಾಂ ಹೆಣ್ಣು ಮಕ್ಕಳು ಮತ್ತು ಗಂಡಸರು ಹಾಕಿಕೊಳ್ಳುವ ಉಂಗುರುಗಳು, 11) 6.200 ಗ್ರಾಂ ಬೇಬಿ ರಿಂಗಗಳು, 12) 43.00 ಗ್ರಾಂ ಜಮಕೆಗಳು 09 ಜೋಡು, 13) 180 ಗ್ರಾಂ ಮಿಕ್ಸ್ ಸಾಮಾನುಗಳು ಈ ಪ್ರಕಾರ ಒಟ್ಟು 446.24 ಗ್ರಾಂ ಒಳಗೊಂಡು ಒಟ್ಟು 31,22,000/- ಚಿನ್ನಾಬರಣಗಳು ಅಲ್ಲದೇ ಡ್ರಾನಲ್ಲಿ ಇಟ್ಟಿದ್ದ 4,30,000/- ರೂಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾರೆಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮೇರಾ ಪುಟೇಜ್ ನೋಡಲಾಗಿ ಯಾರೋ ಮೂರು ಜನರು ಅಜಮಾಸ 30 ರಿಂದ 35 ವರ್ಷ ವಯಸ್ಸಿನವರು ದಿನಾಂಕ: 22/05/2024 ರಂದು ರಾತ್ರಿ 09-40 ಗಂಟೆಯಿಂದ ದಿನಾಂಕ: 26/05/2024 ರಂದು ಮುಂಜಾನೆ 08-00 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಅಂಗಡಿಯಲ್ಲಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಮ್ಮ ಅಂಗಡಿ ಕಳುವು ಮಾಡಿಕೊಂಡು ಹೋಗಿದ್ದಾರೆಂದು ಪೊಲೀಸ್ ಠಾಣೆಗೆ ಅಂಗಡಿ ಮಾಲಿಕ ಶಿವಕುಮಾರ ಕುಂಬಾರ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರ್ಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಹಟ್ಟಿ, ಡಿಎಸ್‍ಪಿ ಬಾಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‍ಐ ಮಹ್ಮದತೋಸಿಫ್ ಘೋರಿ, ಆರ್.ಡಿ.ಲಮಾಣೆ ಅವರು ಬೆಟ್ಟಿ ನೀಡಿ ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.