ಅಕ್ರಮ ಕೋಚಿಂಗ್ ಸೆಂಟರಗಳನ್ನು ರದ್ದು ಮಾಡಲು ಎಸ್ ಎಫ್ ಐ ಆಗ್ರಹ
ಬೀದರ್:ಮೇ.30: ಜಿಲ್ಲೆಯಾದಂತ ನಾಯಿ ಕೊಡೆಗಳಂತೆ ಅಕ್ರಮ ಕೋಚಿಂಗ್ ಸೆಂಟರ್ ಗಳು ತಲೆಯೆತ್ತಿ ನಿಂತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೌನವಾಗಿರವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SಈI) ಜಿಲ್ಲಾ ಸಮಿತಿ ಖಂಡಿಸುತ್ತದೆ ಮತ್ತು ಅಕ್ರಮ ಕೋಚಿಂಗ್ ಸೆಂಟರಗಳನ್ನು ಬಂದ್ ಮಾಡಲು SಈI ಸಂಘಟನೆ ಜಿಲ್ಲಾಧಿಕಾರಿಗಳನ್ನು ಮತ್ತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ಒತ್ತಾಯ ಮಾಡುತ್ತದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರುಣ ಕೋಡಗೆ, ಜಿಲ್ಲಾ ಉಪಾಧ್ಯಕ್ಷರಾದ ಅಮರ ಗಾದಗಿ, ಜಿಲ್ಲಾ ಕಾರ್ಯದರ್ಶಿ ರೋಷನ ಮಲ್ಕಾಪೂರ ಹೇಳಿದರು.
1983 ಶಿಕ್ಷಣ ಕಾಯ್ದೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಜಿಲ್ಲೆಯ ಎಲ್ಲಾ ತಾಲ್ಲೂಕಗಳಲ್ಲಿ ಅಕ್ರಮವಾಗಿ ಟ್ಯೂಷನ್, ಟ್ಯೂಟರಲ್ ಹೆಸರಿನಲ್ಲಿ ಕೋಚಿಂಗ್ ಸೆಂಟರ್ ಗಳನ್ನು ಪ್ರಾರಂಭ ಮಾಡಿದ್ದಾರೆ ಇದಕ್ಕೆ ಪರೋಕ್ಷವಾಗಿ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಬೆಂಬಲಿಸುವ ಮೂಲಕ ಅಕ್ರಮಕ್ಕೆ ಸಾಥ್ ನೀಡಿದ್ದಾರೆ, ಅಲ್ಲದೆ ಕರ್ನಾಟಕ ಶಿಕ್ಷಕರ ನಡುವಳಿಕೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಕೆಲವು ಸರಕಾರಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಕ್ರಮ ಕೋಚಿಂಗ್ ಸೆಂಟರ್ ಪ್ರಾರಂಭ ಮಾಡಿದ್ದಾರೆ ಇದು ಶಿಕ್ಷಣ ಇಲಾಖೆಯಲ್ಲಿ ಬೇಲೆಯ ಎದ್ದು ಹೋಲ ಮೇಯದಂತೆ ಆಗಿದೆ. ಖಾಸಗಿ ಶಾಲೆಗಳ ಶುಲ್ಕ ಕ್ಕಿಂತಲೂ ಕೋಚಿಂಗ್ ಸೆಂಟರ್ ಗಳಲ್ಲಿ ಹೆಚ್ಚಿಗೆ ಹಣ ಪಡೆಯುತ್ತ ಇದ್ದಾರೆ ಎಂದು ಅನೇಕ ಪಾಲಕರು ನಮ್ಮಲ್ಲಿ ದೂರನ್ನು ಹೇಳಿಕೊಂಡಿದ್ದಾರೆ ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ಎದ್ದಿರುವ ಅಕ್ರಮ ಕೋಚಿಂಗ್ ಸೆಂಟರ್ ಗಳಿಂದ ಅನೇಕ ಪಾಲಕರ ಜೇಬಿಗೆ ಕತ್ತರಿ ಬೀಳುತ್ತದೆ ಶಿಕ್ಷಣ ಇಲಾಖೆಯ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ವಿದ್ಯಾರ್ಥಿಗಳ ಪಾಲಕರಿಂದ ಗುಣಮಟ್ಟದ ಶಿಕ್ಷಣ ಹೆಸರಿನಲ್ಲಿ ಮನಬಂದಂತೆ ಹಣ ಪಡೆಯುತ್ತಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SಈI) ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಆದ್ದರಿಂದ ಈ ಕೂಡಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕೋಚಿಂಗ್ ಸೆಂಟರ್ ಗಳನ್ನು ರದ್ದು ಮಾಡಬೇಕು ಮತ್ತು ಶಿಕ್ಷಣ ಇಲಾಖೆಯ ಕೆಲ ಸರಕಾರಿ ಶಿಕ್ಷಕರು ತಾವು ಕೆಲಸ ಮಾಡವು ತಮ್ಮ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡವುದನ್ನು ಬಿಟ್ಟು ಅಕ್ರಮ ಕೋಚಿಂಗ್ ಸೆಂಟರ್ ಗಳಲ್ಲಿ ಪಾಠ ಮಾಡಲು ಹೋಗುತ್ತಿದ್ದಾರೆ ಮತ್ತು ಕೆಲ ಶಿಕ್ಷಕರು ಸೇರಿಕೊಂಡು ಅಕ್ರಮ ಕೋಚಿಂಗ್ ಸೆಂಟರ್ ಗಳನ್ನು ನಡೆಸುತ್ತಿದ್ದಾರೆ ಅಂತಹ ಶಿಕ್ಷಕರನ್ನು ಪತ್ತೆ ಹಚ್ಚಿ ಕೂಡಲೇ ಅಮಾನತ್ತು ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SಈI) ಸಂಘಟನೆ ಜಿಲ್ಲಾಧಿಕಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಲ್ಲಿ ಪತ್ರಿಕೆ ಪ್ರಕಟಣೆ ಮೂಲಕ ಒತ್ತಾಯ ಮಾಡುತ್ತದೆ. ಕ್ರಮಕ್ಕೆ ಮುಂದಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ಮಾಡಲಾಗದೆಂದು ತಿಳಿಸಿದ್ದಾರೆ