ಹಳ್ಳಿಗೆ ಬಿತ್ತನೆ ಬೀಜ ಮಾರಾಟಗಾರ ಬಂದರೆ ಬೀಜ ಪಡೆಯಬೇಡಿ : ಪ್ರಕಾಶ್ ರಾಥೋಡ್
ಸೇಡಂ, ಮೇ, 30: ತಾಲೂಕಿನಲ್ಲಿ ಮುಂಗಾರು ಚುರುಕುಗೊಂಡಿದ್ದು ರೈತರು ಈಗಾಗಲೇ ಭೂಮಿಗೆ ಬೀಜ ಬಿತ್ತಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಹಳ್ಳಿಗಳಿಗೆ ನಕಲಿ ಬೀಜ ಮಾರಾಟಗಾರರು ಬಂದು ಮುಂಗಾರು ಬಿತ್ತನೆ ಬೀಜ ಪಡೆಯ ಬೇಡಿ ಇವರು ರೈತರಿಗೆ ಮೋಸ ಮಾಡುವ ಸಾಧ್ಯತೆ ಇದೆ, ಈಗಾಗಲೇ ಕೆಲವು ವರ್ಷಗಳ ಹಿಂದೆ ನಕಲಿ ಹೆಸರು ಬೀಜ ಪಡೆದು ರೈತರು ಸಂಕಷ್ಟಕ್ಕೀಡಾಗಿದ್ದು ಎಲ್ಲರಿಗೂ ವಿಷಯ ಆದ್ದರಿಂದ ಅಂತಹ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಕೃಷಿ ಇಲಾಖೆಗೆ ಮಾಹಿತಿ ನೀಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಪ್ರಕಾಶ್ ರಾಥೋಡ್ ರೈತರಿಗೆ ಎಚ್ಚರಿಸುತ್ತಾರೆ. ಕೃಷಿ ಇಲಾಖೆಯಲ್ಲಿ ಮಾತನಾಡಿ ರೈತರಿಗೆ ಮನವಿ ಮಾಡಿರುವ ಅವರು ರೈತರು ಅಧಿಕೃತ ಕೇಂದ್ರ ಗಳಿಂದ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿರುವ ಬೀಜಗಳು ಪಡೆದು ಬೀಜೋತ್ಪಾದನೆ ಮಾಡಿ ಭೂಮಿಗೆ ಬೀಜ ಬಿತ್ತುವಂತೆ ಕೃಷಿ ಅಧಿಕಾರಿ ಪ್ರಕಾಶ್ ರಾಥೋಡ್ ರೈತರಿಗೆ ಮನವಿ ಮಾಡಿಕೊಂಡಿದ್ದಾರೆ.