ಭಾಷೆಯ ಬಗ್ಗೆ ಪ್ರೇಮ ಬೆಳೆಸಿಕೊಳ್ಳಬೇಕು: ಡಾ.ಉಮಾಕಾಂತ
ಬೀದರ:ಮೇ.30: ಜನವಾಡಾ ರಸ್ತೆಯ ಸಿದ್ಧಾರ್ಥ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾಗಿ ಆಗಮಿಸಿದ ಡಾ.ಉಮಾಕಾಂತ ಪಾಟೀಲ ಉಪನ್ಯಾಸಕರು ಹಾಗೂ ಸಂಶೋಧನಾ ಮಾರ್ಗದರ್ಶಿ ವೇಂಕಟೇಶ್ವರ ವಿಶ್ವವಿದ್ಯಾಲಯ, ಗಜರೋಲಾ ಉತ್ತರ ಪ್ರದೇಶ ಇವರು ಮಾತನಾಡುತ್ತಾ ಭಾಷಾ ಉಪನ್ಯಾಸಕರು ಭಾಷೇಯ ಬಗ್ಗೆ ಪ್ರೇಮವನ್ನು ಬೆಳೆಸಿಕೊಳ್ಳಬೇಕು, ಭಾಷೇಯಲ್ಲಿ ಕಲಿಯುವದು ಬಹಳಷ್ಟಿದೆ. ಉಪನ್ಯಾಸಕರಿಗೆ ಇದರ ಬಗ್ಗೆ ಆಸಕ್ತಿ ಮೂಡಿದಾಗ ಹೆಚ್ಚು ಹೆಚ್ಚು ಕಲಿಕೆ ಸಾದ್ಯವಾಗುತ್ತದೆ ಎಂದು ನುಡಿದರು. ಮುಂದುವರಿದು ಮಾತನಾಡುತ್ತಾ ತನ್ನ ಮೂಲಕ ಅವರು ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಲು ಸಹಾಯಕವಾಗುತ್ತದೆ ಇದರಿಂದ ಉಪನ್ಯಾಸಕರು ಹೆಚ್ಚು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಈ ಮೂಲಕ ಸಮಾಜದ ಉನ್ನತಿ ಆಗುತ್ತದೆ. ಭಾಷೆ, ಸಾಹಿತ್ಯ ಹಾಗೂ ಸಮಾಜ ಇವು ಒಂದಕ್ಕೊಂದು ಪರಸ್ಪರ ಸಂಬಂಧ ಹೊಂದಿರುತ್ತವೆ. ಸಾಹಿತ್ಯವು ಸಮಾಜದ ಮೇಲೆ ತನ್ನದೆ ಆದ ಪ್ರಭಾವಳಿಯನ್ನು ಹೊಂದಿರುತ್ತದೆ. ಸಮಾಜದ ಅಂಕು-ಡೊಂಕುಗಳನ್ನು ತೋರಿಸುವಲ್ಲಿ ಹಾಗೂ ಅದರ ಬಗ್ಗೆ ಅರಿವು ಮೂಡಿಸಿ ಸಮಾಜವನ್ನು ತಿದ್ದುವಲ್ಲಿ ಸಾಹಿತ್ಯವು ಪರಿಣಾಮಕಾರಿ ಯಾಗಿದೆ ಎಂದು ನುಡಿದರು.
ಹೈದ್ರಾಬಾದಿನ ಇಂಗ್ಲೀಷ ಹಾಗೂ ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ (ಇಈಐU) ದ ಪ್ರಾಧ್ಯಾಪಕರಾದ ಡಾ. ರಾಜು ನಾಯಕ್ ಅವರು ಭಾಷೆಯ ಪ್ರಕಾರಗಳನ್ನು ತಿಳಿಸುತ್ತಾ ಪ್ರಾಚೀನ ಕಾಲದಲ್ಲಿ ಸಾಹಿತ್ಯವು ಒಂದು ವರ್ಗದ ಸ್ವತ್ತಾಗಿತ್ತು ಆದರೆ ಆಧುನಿಕ ಯುಗದಲ್ಲಿ ಇಂತಹ ಯಾವುದೇ ನಿಭರ್ಂಧಗಳು ಇರುವುದಿಲ್ಲಾ, ಸಾಹಿತ್ಯವು ಸಾಮಾನ್ಯ ಜನರಿಗೂ ಕೂಡ ಲಭ್ಯವಿರುತ್ತದೆ. ಸಾಹಿತ್ಯದ ಹೊರತಾಗಿ ಸಮಾಜವಿಲ್ಲ ಹಾಗೂ ಸಮಾಜದ ಹೊರತಾಗಿ ಸಾಹಿತ್ಯ ವಿಲ್ಲವೆಂದು ನುಡಿದರು. ಈ ಮೂಲಕ ಇಂದಿನ ಇಂಗ್ಲೀಷ ಸಾಹಿತ್ಯ ಜಾಗತೀಕ ಸಾಹಿತ್ಯವಾಗಿ ಬೆಳೆದಿದೆ ಎಂದರು.
ಹೈದ್ರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಲಿಂಗಣ್ಣ ಗೋನಾಳ ಇವರು ಮಾತನಾಡುತ್ತ ಸಮಾಜದ ಓರೆ ಕೋರೆಗಳನ್ನು ಜನರಿಗೆ ತಿಳಿಸಿ ಸಮಾಜದ ಅಭಿವೃದ್ದಿಯಲ್ಲಿ ಸಾಹಿತ್ಯವು ಮಹತ್ವವಾದ ಪಾತ್ರವಹಿಸುತ್ತದೆ, ಸಾಹಿತ್ಯವು ಸಮಾಜದಲ್ಲಿ ನಡೆಯುವ ವರ್ತಮಾನಗಳ ಕುರಿತಾಗಿ ಇರುತ್ತದೆ. ಕುವೆಂಪುರವರ “ಮಲೆಗಳಲ್ಲಿ ಮದುಮಗಳು” ಹಾಗೂ ಇನ್ನಿತರ ಸಾಹಿತಿಗಳ ಕೃತಿಗಳನ್ನು ವಿಶ್ಲೇಷಿಸುತ್ತಾ ಅವು ಹೇಗೆ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎನ್ನುವದನ್ನು ವಿವರವಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಪಿ.ಇ. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಚಂದ್ರಶೇಖರ ಶಿಲವಂತ ಅವರು ಮಾತನಾಡುತ್ತಾ ಸಂಸ್ಥೆಯು ಇಂತಹ ಉಪಯುಕ್ತ ವಿಚಾರ ಸಂಕೀರ್ಣಗಳನ್ನು ನಡೆಸಲು ಉತ್ಸುಕವಾಗಿದೆ ಮತ್ತು ಎಲ್ಲಾ ಸಹಾಯವನ್ನು ನೀಡುತ್ತದೆಂದು ನುಡಿದರು. ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪಾ ಸೂರನ್ ಇವರು ಮಾತನಾಡುತ್ತಾ ವಿಚಾರ ಸಂಕೀರ್ಣವು ಪ್ರಮುಖವಾದ ವಿಷಯದ ಬಗ್ಗೆ ಇರುತ್ತದೆ ಹಾಗೂ ಇದರ ಬಗ್ಗೆ ಚಿಂತನೆ ಅತ್ಯವಶ್ಯಕವಾಗಿದೆ. ಸಮಾಜವನ್ನು ತಿದ್ದುವಲ್ಲಿ ಸಾಹಿತ್ಯದ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಗೋಪಾಲ ಬಡಿಗೇರ್ ಇವರು ಅತಿಥಿಗಳನ್ನ ಸ್ವಾಗತಿಸುತ್ತಾ ವಿಚಾರ ಸಂಕೀರ್ಣದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಆಂಗ್ಲ ಉಪನ್ಯಾಸಕರಾದ ಗಿರೀಶ. ಮೀಶಿ ಅವರು ಕಾರ್ಯಕ್ರಮದ ಸಂಚಾಲನ ಮಾಡಿದರು. ವಿವಿಧ ಕಾಲೇಜುಗಳಿಂದ ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಆಗಮಿಸಿ ಕನ್ನಡ, ಇಂಗ್ಲೀಷ ಹಾಗೂ ಹಿಂದಿ ವಿಷಯಗಳ ಪ್ರಥಮ ಹಾಗೂ ದ್ವಿತೀಯ ತಾಂತ್ರಿಕ ಗೋಷ್ಠಿಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ಡಾ. ಪರಮೇಶ್ವರ ನಾಯಕ ಕುಲಸಚಿವರು ಬೀದರ ವಿಶ್ವವಿದ್ಯಾಲಯ ಬೀದರ ಇವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಚಾರ ಸಂಕೀರ್ಣದ ಬಗ್ಗೆ ಮಾತನಾಡುತ್ತಾ ಸಾಹಿತ್ಯವು ಮೌಲ್ಯವನ್ನ ಎತ್ತಿ ಹಿಡಿಯುತ್ತದೆ ಎಂದು ನುಡಿದರು. ಇಂತಹ ವಿಚಾರ ಸಂಕೀರ್ಣಗಳು ಮೇಲಿಂದ ಮೇಲೆ ಜರುಗಬೇಕೆಂದು ಹೆಳಿದರು.