ವಿಶ್ವ ಋತುಚಕ್ರ ನೈರ್ಮಲ್ಯ ದಿನ
ಬೀದರ:ಮೇ,30:ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಈPಂI) ಬೀದರ ಶಾಖೆಯ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಬೀದರನ ಗುಂಪಾ ಏರಿಯಾದಲ್ಲಿರುವ ಮೆಟ್ಟಿಕ್ ನಂತರದ ಮಹಿಳಾ ವಸತಿನಿಲಯದಲ್ಲಿ “ವಿಶ್ವ ಋತುಚಕ್ರ ನೈರ್ಮಲ್ಯ ದಿನ” ಕುರಿತು ಹದಿಹರೆಯದ ವಿದ್ಯಾರ್ಥಿನಿಯರಿಗೆ ಅರಿವು/ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈPಂI ಸಂಸ್ಥೆಯ ಹಣಕಾಸು ಸಲಹಾಗಾರರಾದ ಶ್ರೀಮತಿ ರೇಖಾ ಚಂದಾ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿ, ” ಜೀವ ಸೃಷ್ಟಿಯ ಮೂಲಕ್ರಿಯೆಯಾದ ಋತುಚಕ್ರ (ಮುಟ್ಟು) ಜೀವಜಗತ್ತನ್ನು ಮುಂದುವರೆಸಲು ಅತ್ಯಗತ್ಯವಾದ ಒಂದು ಕ್ರಿಯೆಯಾಗಿದೆ. ಆದ್ದರಿಂದಲೇ ಋತುಚಕ್ರದ ಕುರಿತು ಅರಿವು ಮೂಡಿಸಲು ಪ್ರತಿವರ್ಷ ಮೇ 28 ರಂದು “ಋತುಚಕ್ರ ನೈರ್ಮಲ್ಯ ದಿನ” ಆಚರಣೆ ಮಾಡುವುದರ ಮುಖಾಂತರ ಪ್ರತಿಯೊಬ್ಬರು ಈ ಋತುಚಕ್ರದ ವೈಜ್ಞಾನಿಕ ಪ್ರಕ್ರಿಯೆಯ ಬಗ್ಗೆ ಅರಿತುಕೊಳ್ಳಬೇಕು ಹಾಗೂ ಎಲ್ಲರೂ ಒಟ್ಟಾಗಿ ಋತುಚಕ್ರದ ಬಗ್ಗೆ ಸ್ನೇಹಪರ ವಾತಾವರಣ ಮೂಡಿಸಬೇಕು. ಋತುಚಕ್ರ ಪ್ರಕೃತಿ ಮಹಿಳೆಯರಿಗೆ ನೀಡಿರುವ ಒಂದು ವರದಾನವಾಗಿದೆ. ಆದ್ದರಿಂದ ನಾವು ಮಹಿಳೆಯರಾಗಿರುವುದಕ್ಕೆ ಹೆಮ್ಮೆ ಪಡೋಣ ಎಂದು ತಿಳಿಸಿದರು.
ಈPಂI ಸಂಸ್ಥೆಯ ಕಾರ್ಯಕಾರಿಣಿ ಸಭೆಯ ಸದಸ್ಯರಾದ ಡಾ. ಎ.ಸಿ. ಲಲಿತಮ್ಮಾ ಇವರು “ಹದಿಹರೆಯದ ಹೆಣ್ಣುಮಕ್ಕಳ ದೈಹಿಕ ಬದಲಾವಣೆ ಕುರಿತು, ಋತುಚಕ್ರ ಎಂದರೇನು?, ಋತುಚಕ್ರದ ಅವಧಿ, ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್ಸ್, ಬಟ್ಟೆ, ಟ್ಯಾಂಪೂನ್ಸ್ ಹಾಗೂ ಮೆನೆಸ್ಟ್ರಲ್ ಕಪ್ ಇವುಗಳ ಬಳಕೆಯ ಕುರಿತು ಹಾಗೂ ಋತುಚಕ್ರದ ಸಮಯದಲ್ಲಿನ ವೈಯಕ್ತಿಕ ಶುಚಿತ್ವ ಹಾಗೂ ಪೌಷ್ಟಿಕ ಆಹಾರದ ಕುರಿತು” ವಿವರವಾದ ಮಾಹಿತಿ ತಿಳಿಸಿದರು. ಹಾಗೂ ಮಹಿಳೆಯರು ಋತುಚಕ್ರದ ಬಗ್ಗೆ ಸರಿಯಾದ ಅರಿವು ಮಾಹಿತಿ ಪಡೆದುಕೊಂಡು ಆತ್ಮವಿಶ್ವಾಸದಿಂದ ಮುಟ್ಟಿನ ದಿನಗಳನ್ನು ನಿರ್ವಹಣೆ ಮಾಡಬೇಕು” ಎಂದು ತಿಳಿಸಿದರು.
ಈPಂI- ಬೀದರ ಶಾಖೆಯ ಕಾರ್ಯಕ್ರಮ ಅಧಿಕಾರಿಯಾದ ವಿಜಯಲಕ್ಷ್ಮಿ ಹುಡುಗೆ ಇವರು ಸಂಸ್ಥೆಯ 50 ವರ್ಷಗಳ ಕಾರ್ಯಚಟುವಟಿಕೆಗಳ ಕುರಿತು ಹಾಗೂ ಋತುಚಕ್ರ ಶುಚಿತ್ವ ದಿನದ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರಿಗೂ ಸ್ವಾಗತ ಕೋರಿದರು.
ವಿದ್ಯಾರ್ಥಿನಿಲಯದ ಮೇಲ್ವಿಚಾರಕಿಯಾದ ಶ್ರೀಮತಿ ಸೋನಿಕಾ ಇವರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ 90ಕ್ಕೂ ಅಧಿಕ ವಿದ್ಯಾರ್ಥನಿಯರು ಋತುಚಕ್ರ ಶುಚಿತ್ವ/ನೈರ್ಮಲ್ಯ ಕುರಿತು ಅರಿವು/ಮಾಹಿತಿ ಪಡೆದುಕೊಂಡರು. ಹಾಗೂ ಈPಂI ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀಲ್ ಇವರ ಪ್ರಾಯೋಜಕತ್ವದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ಸ್ ವಿತರಿಸಲಾಯಿತು.