ಶರಣತತ್ವ ಪ್ರಚಾರಕ್ಕೆ ಅಕ್ಕ ಅನ್ನಪೂರ್ಣ ಕೊಡುಗೆ ಅಪಾರ
ಆಳಂದ:ಮೇ.30: ಪಟ್ಟಣದ ಲಿಂಗಾಯತ ಭವನದಲ್ಲಿ ಶರಣ ಸಾಹಿತ್ಯ ಪರಿಷತ್, ಅಖೀಲ ಭಾರತ ವೀರಶೈವ ಮಹಾಸಭಾ ಹಾಗೂ ವಚನ ಸಾಹಿತ್ಯ ಪರಿಷತ್, ಬಸವ ಬಳಗದ ಸಹಯೋಗದಲ್ಲಿ ಬೀದರ್ ನ ಲಿಂಗಾಯತ ಮಹಾ ಮಠದ ಸಂಸ್ಥಾಪಕಿ ಅಕ್ಕ ಅನ್ನಪೂರ್ಣ ತಾಯಿಗೆ ನುಡಿನಮನ ಸಲ್ಲಿಸಲಾಯಿತು.
ಉಪನ್ಯಾಸಕ ರಮೇಶ ಮಾಡಿಯಾಳಕರ ಮಾತನಾಡಿ ಶರಣ ತತ್ವಗಳನ್ನು ನಾಡಿನಾದ್ಯಂತ ಪ್ರಸಾರಗೊಳಿಸಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ನುಡಿ ಬೆಳಗಿನ ಮೂಲಕ ಬಸವ ಚಿಂತನೆಯನ್ನು ಭೋಧಿಸಿದ್ದಾರೆ ಎಂದು ನುಡಿದರು .ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎಲ್ ಎಸ್ ಬೀದಿ, ಸಂಬುದ್ಧ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಸಂಜಯ ಪಾಟೀಲ, ಶಿಕ್ಷಕ ಮಲ್ಲಿನಾಥ ವಚ್ಚೆ, ಬಾಬುರಾವ ಮಡ್ಡೆ, ಮುಖ್ಯ ಶಿಕ್ಷಕ ದತ್ತಾತ್ರೇಯ ಬಿರಾದಾರ, ಭೀಮಾಶಕರ ಜಮಗಿ, ಸಿದ್ರಾಮ ನಾಗುರೆ, ಕಲ್ಯಾಣಿ ತುಕ್ಕಾಣೆ, ಹಣಮಂತ ಕರ್ ,ಪುರಸಭೆ ಸದಸ್ಯ ಈರಣ್ಣ ಹತ್ತರಕಿ, ಮುಂತಾದವರು ಉಪಸ್ಥಿತರಿದ್ದರು.