ನಿಷ್ಠೆಯಿಂದ ಕಾರ್ಯನಿರ್ವಹಿಸಿಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಿ
ಬೀದರ:ಮೇ.30:2024ರ ದ್ವಿತೀಯ ಪಿಯು ಪರೀಕ್ಷೆ-1 ರ ಬೀದರ ಜಿಲ್ಲೆಯ ಫಲಿತಾಂಶ ಶೇ.81.69 ಆಗಿದ್ದು,ಕಲ್ಯಾಣ-ಕರ್ನಾಟಕ ಭಾಗದಲ್ಲಿ ನಂಬರ ಒನ್ ಸ್ಥಾನದÀಲ್ಲಿತ್ತು.ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಸಿಂಗಲ್ ಡಿಜಿಟ್‍ನಲ್ಲಿ ತರುವ ಪ್ರಯತ್ನ ಎಲ್ಲರಿಂದ ನಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ )ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ ಸಲಹೆ ನೀಡಿದರು.
ನಗರದ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಕರೆದ ಜಿಲ್ಲಾ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಭೆಯನ್ನೊದ್ದೇಶಿಸಿ ಮಾತನಾಡಿದರು.
ಜೂನ ಒಂದರಿಂದ ಪಿಯು ತರಗತಿಗಳು ಆರಂಭಗೊಳ್ಳುತ್ತಲಿವೆ.ಸಂಬಂಧಪಟ್ಟ ಕಾಲೇಜಿನವರು ಅತಿ ವಿಜೃಂಭಣೆಯಿಂದ ವರ್ಗಗಳು ಆರಂಭಿಸಿ,ಮಕ್ಕಳ ಕಲಿಕೆಯ ಲವಲವಿಕೆ ಹೆಚ್ಚಿಸಬೇಕು.ಕಾಲೇಜಿನ ಸಿಬ್ಬಂದಿ ವರ್ಗ `ದಾಖಲಾತಿ ಆಂದೋಲನ’ದ ಮೂಲಕ ದಾಖಲಾತಿ ಸಂಖ್ಯೆ ವೃದ್ಧಿಸಿಕೊಳ್ಳಬೇಕು.ಇತ್ತೀಚೆಗೆ ಪಾಲಕ- ಮಕ್ಕಳ ಒಲವು ಅನುದಾನರಹಿತ ಕಾಲೇಜುಗಳ ಕಡೆ ವಾಲುತ್ತಿದೆ.ಹಾಗಾಗಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆÉ.ಸರ್ಕಾರಿ ಮತ್ತು ಅನುದಾನಿತ ಕಾಲೇಜಿನವರು ಸಹ ವಿನೂತನ ಮಾದರಿ ತಂತ್ರಗಾರಿಕೆ ಮೂಲಕ ಮಕ್ಕಳನ್ನು ಆಕರ್ಷಣೆ ಮಾಡಬೇಕು.ಪ್ರಸ್ತುತ ಸಾಲಿನ ನೂತನ ಅರ್ಜೀ 13 ಭರ್ತಿ ಮಾಡಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು.ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಜೀವನದಲ್ಲಿ ಪರಿವರ್ತನೆ ತರಬೇಕು.
ಕಛೇರಿ ಸಿಬ್ಬಂದಿ ಕ್ಯಾಶಬುಕ್ ಅಪಡೇಟ್‍ಆಗಿ ಇಡಬೇಕು.ಬೋಧಕ ಸಿಬ್ಬಂದಿ ಲೆಸನ್‍ನೋಟ್ಸ್,ವಾರ್ಷಿಕ ಯೋಜನೆ,ಮಕ್ಕಳ ಹಾಜರಾತಿ ಸೇರಿದಂತೆ ಇತರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಡಬೇಕು.ಇಲಾಖೆಯವರು ಕೇಳಿದ ಮಾಹಿತಿ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು.ಕಾಲೇಜಿನ ವೇಳಾಪಟ್ಟಿಯಂತೆ ಎಲ್ಲ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು.ಶೇ.40ಕ್ಕಿಂತ ಕಡಿಮೆ ಫಲಿತಾಂಶ ಇರುವ ಕಾಲೇಜುಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು.ಈಗಾಗಲೇ ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಮೌಲ್ಯಮಾಪನ ಮುಗಿದು ಫಲಿತಾಂಶ ಕೂಡ ಪ್ರಕಟಣೆಯಾಗಿದೆ.ಪರೀಕ್ಷೆ-3 ಬರೆಯುವ ಮಕ್ಕಳ ಮಾಹಿತಿ ಸ್ಯಾಟ್ಸ್ ಪೋರ್ಟಲ್‍ನಲ್ಲಿ ಇಂಧಿಕರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ,ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರ ಸೂರ್ಯವಂಶಿ, ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ಸೇರಿದಂತೆ ಜಿಲ್ಲೆಯ ವಿವಿದ ಕಾಲೇಜಿನ ಪ್ರಾಚಾರ್ಯರು,ಉಪನ್ಯಾಸಕರು ಹಾಜರಿದ್ದರು.ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ ಸ್ವಾಗತಿಸಿ,ನಿರೂಪಿಸಿದರು.