ಸಚಿವ ನಾಗೇಂದ್ರರ ಬೆಳವಣಿಗೆ ಸಹಿಸದೆ ನಿರಾಧಾರ ಆರೋಪ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ 30:  ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಗಳ ಸಚಿವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ನಾಗೇಂದ್ರ ಅವರ ಮೇಲೆ ಬಿಜೆಪಿಯವರು ಮಾಡುತ್ತಿರುವ ಆರೋಪ ನಿರಾಧಾರವಾದುದು ಎಂದು
ಮೀನಳ್ಳಿ ಮಂಡಲ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶ್  ಮತ್ತು ಜನತಾ ಬಜಾರ್ ನ ನಿರ್ದೇಶಕರೂ ಆಗಿರುವ ಕಾಂಗ್ರೆಸ್ ಪಕ್ಷದ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಅಲ್ಲಿಪುರದ ಕೆ.ವೆಂಕಟಸ್ವಾಮಿ
ಅವರು ಇಂದು ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಎಸಗಿರುವ ಹಣಕಾಸಿನ ವಂಚನೆ ಪ್ರಕರಣಕ್ಕೂ ಸಚಿವ ಬಿ.ನಾಗೇಂದ್ರ ಅವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಬಂದಿರುವ ವರದಿಗಳು, ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯ ಡೆತ್ ನೋಟ್ ಹಾಗೂ ಮೃತನ ಪತ್ನಿ ನೀಡಿರುವ ದೂರಿನಲ್ಲಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಪ್ರಸ್ತಾಪವಾಗಿರುವುದಿಲ್ಲ. ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಅಧಿಕಾರಿಯ ಸಾವಿಗೆ ಸಚಿವ ಬಿ.ನಾಗೇಂದ್ರ ಅವರು ಯಾವುದೇ ರೀತಿಯಲ್ಲಿ ಕಾರಣೀಕರ್ತರಲ್ಲ.
ಮೃತ ವ್ಯಕ್ತಿ ಅಧಿಕಾರಿಯು ತಾನು ಸಾಯುವ ಮುನ್ನ ಬರೆದ ಡೆತ್ ನೋಟಿನಲ್ಲಿ ಆತನ ಸಾವಿಗೆ ಯಾರು ಕಾರಣ ಎಂದು ನೇರವಾಗಿ ನಿಗಮದ ಇಬ್ಬರು ಅಧಿಕಾರಿಗಳು ಹಾಗೂ ಒಬ್ಬ ಬ್ಯಾಂಕ್ ಮ್ಯಾನೇಜರ್ ಅವರು ಸೇರಿದಂತೆ  ಮೂವರ ಹೆಸರನ್ನು ಸ್ಪಷ್ಟವಾಗಿ ಬರೆದಿದ್ದಾರೆ.
ಆದರೆ ಅನಗತ್ಯವಾಗಿ ಸಚಿವರಾದ ಬಿ.ನಾಗೇಂದ್ರ ಅವರ ಹೆಸರನ್ನು ಕೆಡಿಸಲು, ಕಾಂಗ್ರೆಸ್ನ ಉತ್ತಮ ಆಡಳಿತವನ್ನು ಸಹಿಸದೆ  ಬಿಜೆಪಿಯ ಮುಖಂಡರು ವಿನಾಕಾರಣ ಆರೋಪದ ಪ್ರಯತ್ನ ನಡೆಸಿದ್ದಾರೆ.
ನಿಗಮದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿ ಸಿಐಡಿ ತನಿಖೆಗೆ ಸಚಿವರು ನೀಡಿದ್ದು, ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಿ ಪ್ರಕರಣ ದಾಖಲಿಸಿ ಸಚಿವರು ತಮ್ಮ ಪ್ರಾಮಾಣಿಕ ಕೆಲಸ ಮಾಡಿದ್ದಾರೆ‌
ವಾಲ್ಮೀಕಿ ಸಮಯದಾಯದಲ್ಲಿ ರಾಜಕೀಯವಾಗಿ ಪ್ರಬಲವಾಗಿ ಬೆಳೆಯುತ್ತಿರುವ ಹಾಗು ಎಲ್ಲಾ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಚಿವರ ತೇಜೋವಧೆ ಮಾಡುವ ಷ್ಯಡ್ಯಂತ್ರ ಇದಾಗಿದೆ.
ಹಾಗಾಗಿ ಸಚಿವರ ರಾಜಿನಾಮೆ ಕೇಳುವ ನೈತಿಕತೆ ಬಿಜೆಪಿಯವರಿಗಿಲ್ಲ‌.
 ಮುಖಂಡರುಗಳಾದ ಯರಗುಡಿ ಜಿ.ಈಶ್ವರ, ಮೋಕ ಪಂಪಾಪತಿ, ಮೀನಳ್ಳಿ ಶ್ರೀರಾಮ್, ಬಿ.ಶಿವಾಜಿ, ಜಿ.ನಾಗೇನಹಳ್ಳಿ ಶಂಕ್ರಪ್ಪ, ಕಮಟನಾಳ್ ಎರಿಸ್ವಾಮಿ, ಅಮರಾಪುರ ಬಸವರಾಜ್, ಗುಮ್ಮನೂರು ಬುಜ್ಜಿ ರೂಪನಗುಡಿ ರಾಮಾಂಜಿನಿ, ಯಾಳ್ಪಿ ನಾಗಭೂಷಣ, ಲಿಂಗದೇವನಹಳ್ಳಿ ಜನಾರ್ಧನರೆಡ್ಡಿ, ಯರಗುಡಿ ಅಂಜಿನಪ್ಪ, ಕೊಳಗಲ್ಲು ವಾಲ್ಮೀಕಿ ಅಂಜಿನಪ್ಪ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.