ಶ್ರೀವರವಿನ ಮಲ್ಲೇಶ್ವರ ದೇವಸ್ಥಾನ ಹುಂಡಿ ಎಣಿಕೆ: 2.49 ಲಕ್ಷ ಸಂಗ್ರಹ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.30: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಶ್ರೀವರವಿನ ಮಲ್ಲೇಶ್ವರ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ಪರಿವೀಕ್ಷಕಿ ಭುವನೇಶ್ವರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಶಿವರುದ್ರ ಗೌಡ, ಬ್ಯಾಂಕ್ ವ್ಯವಸ್ಥಾಪಕ ಸತೀಶ್ ರೆಡ್ಡಿ, ಸದಸ್ಯರಾದ ಬೆಳಗಲ್ ಮಲ್ಲಿಕಾರ್ಜುನ, ಎ ಮಲ್ಲಿಕಾರ್ಜುನ, ಶೇಕಪ್ಪ, ವೀರೇಶ, ಮಲ್ಲಯ್ಯ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.
ಜನವರಿ ಯಿಂದ ಮೇ ತಿಂಗಳ ವರೆಗಿನ ಸಂಗ್ರಹವಾಗಿದ್ದ 2,49,985  ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.