ಮಂಡಲ ಪೂಜಾ ಕಾರ್ಯಕ್ರಮ
ನವಲಗುಂದ,ಮೇ30: ಸತ್ಯ,ಅಹಿಂಸೆಯ ಮೂಲಕ ಆಧ್ಯಾತ್ಮೀಕ ಮಾರ್ಗದರ್ಶನದಂದಿಗೆ ಆತ್ಮ ಕಲ್ಯಾಣದ ಹಾದಿಯಲ್ಲಿ ನಡೆಯುವುದನ್ನು ಬೋಧಿಸಿದ ಭಗವಾನ್ ಮಹಾವೀರರು ವಿಶ್ವಕ್ಕೆ ಶಾಂತಿಯನ್ನು ಪ್ರತಿಪಾದಿಸಿದ ಮಹಾಪುರುಷರಾಗಿದ್ದರು ಎಂದು ಶ್ರೀಕ್ಷೇತ್ರ ಸೊಂದಾ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಳಂಕ ಭಟ್ಟಾರಕ ಸ್ವಾಮಿಜಿ ಹೇಳಿದರು.
ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಭಗವಾನ1008 ಶ್ರೀ ಪಾಶ್ರ್ವನಾಥ ತೀರ್ಥಂಕರ ಜೀನ ಬಿಂಬದ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಮಂಡಲ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು ಭೂಮಿಯ ಮೇಲಿರು ಎಲ್ಲಾ ಜೀವಿಗಳನ್ನೂ ಗೌರವಿಸುವ ಮೂಲಕ ಭೋಗ ಜೀವನಕ್ಕಿಂತ ತ್ಯಾಗ ಜೀವನ ಲೇಸೆಂದು ಸಾರಿದ ಮಹಾವೀರ ಸಂದೇಶಗಳು ಮನುಷ್ಯನೂ ಶ್ರೇಷ್ಠತೆಯಡೆ ಮುನ್ನಡೆಯಲು ಸರ್ವಕಾಲಿಕ ಸಾಧನಗಳಾಗಿವೆ ಎಂದರು.
ಜೈನ ಸಮಾಜದ ಅಧ್ಯಕ್ಷ ವಿದ್ಯಾಧರ ಪಾಟೀಲ್ ಹಿಂದಿನಿಂದಲೂ ತಾಲೂಕಿನ ಸಣ್ಣ,ಸಣ್ಣ ಗ್ರಾಮಗಳಲ್ಲೂ ಜೈನ ಬಸದಿಗಳ ಜೀರ್ಣೋದ್ದಾರ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿಯಾಗಿದ್ದು ಎಲ್ಲರೊಂದಿಗೂ ಪ್ರೀತಿ,ಸೌಹಾರ್ದಯುತವಾಗಿ ಬದುಕುವುದೇ ಜೈನ ಧರ್ಮದ ಮೂಲ ಉದ್ದೇಶವಾಗಿದೆ ಎಂದರು.
ಪೆÇ್ರ.ಜೀನದತ್ತ ದೇಸಾಯಿ ಮಾತನಾಡಿ ತಾಲೂಕಿನಲ್ಲಿ ಇರುವ ಜೈನ ಧರ್ಮದ ಇತಿಹಾಸ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಸೊಂದಾ ಶ್ರೀಗಳು ಗುಡಿಸಾಗರ ಗ್ರಾಮದ ಚಳ್ಳಪ್ಪ ಬಸ್ತಿಯವರಿಗೆ ಪಂಡಿತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಸುಮಂಗಲಮ್ಮ(ಅಕ್ಕಾತಾಯಿ), ಬಾಹುಬಲಿ ಬಸ್ತಿ(ಪಂಡಿತ), ಸೋಮನಗೌಡ ಹಿರೇಗೌಡರ, ವರ್ಧಮಾನಗೌಡ ಹಿರೇಗೌಡರ, ಭರಮಗೌಡ ಹಿರೇಗೌಡರ, ಶ್ರೀಮಂದರ ಉಪಾಧ್ಯೆ ಉಪಸ್ಥಿತರಿದ್ದರು.