ಹೆಚ್ಚುವರಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ
ಲಕ್ಷ್ಮೇಶ್ವರ,ಮೇ30: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳು ಆರಂಭವಾಗಿರುವುದರಿಂದ ನಿಗದಿತ ವೇಳೆಗೆ ಶಾಲಾ ಕಾಲೇಜುಗಳನ್ನು ತಲುಪುವುದು ಅತ್ಯಂತ ಕಷ್ಟವಾಗಿದೆ.
ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯದಾಗಿ ವಿದ್ಯಾರ್ಥಿಗಳು ಬಸ್ಸುಗಳಲ್ಲಿ ತಮ್ಮ ತಮ್ಮ ಗ್ರಾಮಗಳಿಂದ ವಿದ್ಯಾ ಕೇಂದ್ರಗಳಿಗೆ ಬರಲು ಪರದಾಡುವ ಸ್ಥಿತಿ ಇದೆ ಕಳೆದ ವರ್ಷ ಹೇಗೋ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷವನ್ನು ಮುಗಿಸಿ ಈಗ ಹೊಸ ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟಿದ್ದು ವಿದ್ಯಾರ್ಥಿಗಳಿಗೆ ಆಗಲೇ ವರ್ಷಾನುಗಟ್ಟಲೆ ಕಾಲೇಜಿಗೆ ಹೋಗುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಲಕ್ಷ್ಮೇಶ್ವರ ಗದಗ ಮಾಗಡಿ ಶಿಗ್ಲಿ ಮತ್ತು ಸಂಶಿ ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಲಕ್ಷ್ಮೇಶ್ವರಕ್ಕೆ ಸವಣೂರು ಶಿಗ್ಗಾವಿ ಕುಂದಗೋಳ ಸೇರಿದಂತೆ ಸುತ್ತಮುತ್ತಲ ತಾಲೂಕುಗಳ ವಿದ್ಯಾರ್ಥಿಗಳು ಬರುತ್ತಿದ್ದಾರೆ.
ಉದಾಹರಣೆಗೆ ಕುಂದಗೋಳ ತಾಲೂಕಿನ ಹಿರೇಗುಂಜಳ ಮತ್ತು ಪಶುಪತಿ ಹಾಳಗಳಿಂದ ನೂರಾರು ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಮತ್ತು ಸಂಶಿ ಮಾಗಡಿ ಗ್ರಾಮಗಳಿಗೆ ಬರುತ್ತಿದ್ದಾರೆ ಆದರೆ ಸದಾ ಬಸ್ಸುಗಳು ಮಹಿಳೆಯರಿಂದಲೇ ತುಂಬಿಕೊಂಡಿರುವುದರಿಂದ ವಿದ್ಯಾರ್ಥಿಗಳು ಜೀವದ ಹಂಗು ದೊರೆದು ಜೋತು ಬಿದ್ದು ಗ್ರಾಮಗಳನ್ನು ಮುಟ್ಟಬೇಕಾದ ಅಪಾಯದ ಸ್ಥಿತಿ ಇದೆ ಸರ್ಕಾರ ಶಕ್ತಿ ಯೋಜನೆಯನ್ನು ರೂಪಿಸಿ ಅನುಕೂಲ ಮಾಡಿದೆ ಎನ್ನಬಹುದಾದರೂ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಿ ಯಾವುದೇ ಪೂರಕ ವ್ಯವಸ್ಥೆ ಇಲ್ಲದೆ ಈ ರೀತಿ ಮಾಡಿರುವುದು ಅಸಮಂಜಸ ಎಂಬ ಅಭಿಪ್ರಾಯ ಪೆÇೀಷಕರಿಂದಲೇ ಕೇಳಿ ಬರುತ್ತಿದೆ.
ಈ ಕುರಿತು ಭಾರತೀಯ ಜನತಾ ಪಕ್ಷದ ಶಿರಹಟ್ಟಿ ಮಂಡಲದ ಅಧ್ಯಕ್ಷರಾದ ಸುನಿಲ್ ಮಹಾಂತ ಶೆಟ್ಟರ್ ಪ್ರತಿಕ್ರಿಯೆ ನೀಡಿ ಸರ್ಕಾರ ಶಕ್ತಿ ಯೋಜನೆ ಮಾಡಿರುವುದು ಅನುಕೂಲವಾದರೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಏಟು ನೀಡಿದೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಬಸ್ಸುಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ ಮೇಲಾಗಿ ಬಹುತೇಕ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಪರ್ಕ ಅತ್ಯಂತ ಕ್ಲಿಷ್ಟವಾಗಿದೆ ಸರ್ಕಾರ ಬೆಳಗಿನ 7:00 ಯಿಂದ 10:00ಯವರೆಗೆ ಸಾಯಂಕಾಲ 3 :45 ರಿಂದ 5 ಗಂಟೆಯವರೆಗೆ ಹೆಚ್ಚುವರಿ ಗ್ರಾಮೀಣ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.