ಶಾಲಾ ಪ್ರಾರಂಭೋತ್ಸದ ಪೂರ್ವಭಾವಿ ಸಭೆ
ಚನ್ನಮ್ಮನ ಕಿತ್ತೂರ,ಮೇ 30: ತಾಲೂಕಿನ ದೇವಗಾಂವ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿ ಸಭೆ ಮತ್ತು ಶಾಲಾ ಸ್ವಚ್ಛತೆ ಕಾರ್ಯಕ್ರಮ ಜರುಗಿತು.
ಸಭೆಯನ್ನುದ್ದೇಶಿಸಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಮುಖ್ಯೋಪಾಧ್ಯಾಯ ಸದಾಶಿವ ಪೆÇೀಳ ಪೆÇೀಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದರಲ್ಲದೇ, ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಲು ಪೆÇೀಷಕರಲ್ಲಿ ಮನವಿ ಮಾಡಿಕೊಂಡರು.
ಶಾಲೆಗೆ ಕಡ್ಡಾಯವಾಗಿ ಶಿಕ್ಷಕರು ಹಾಜರಿದ್ದು ಶಾಲಾ ಸ್ವಚ್ಚತೆ ಕೈಗೊಳ್ಳಬೇಕು. ಅಡುಗೆ ಸಿಬ್ಬಂದಿ ಅಡುಗೆ ಕೋಣೆ, ಆಹಾರ ದಾಸ್ತಾನುಗಳನ್ನು ಶುದ್ಧಗೊಳ್ಳಿಸಿ ತಯಾರಿಸಬೇಕು. ಮೇ.31 ರಂದು ಶಾಲೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ ಬಿಸಿಯೂಟದಲ್ಲಿ ಸಿಹಿ ತಿನಿಸು ಮಾಡಿ ವಿದ್ಯಾರ್ಥಿಗಳಿಗೆ ಸಂಭ್ರದಿಂದ ಸ್ವಾಗತಿಸಿಕೊಳ್ಳಲಾಗುವುದೆಂದು ಹೇಳಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ,, ಎಸ್ ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ, ಪೆÇೀಷಕರು, ಗ್ರಾಮದ ಹಿರಿಯರು, ಹಾಗೂ ಸಹಶಿಕ್ಷಕರು, ಮಕ್ಕಳು, ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.