ಕರ್ನಾಟಕ ಈಶಾನ್ಯ ಪದವಿಧರ ಚುನಾವಣೆ: ವಿಜಯನಗರ ಸಿದ್ಧ – ಎಂ.ಎಸ್.ದಿವಾಕರ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ30: ಜೂನ್ 3ರಂದು ನಡೆಯುವ ಕರ್ನಾಟಕ ಈಶಾನ್ಯ ಪದವಿಧರ ಚುನಾವಣೆ-2024  ಮತದಾನಕ್ಕೆ  ವಿಜಯನಗರ ಜಿಲ್ಲೆಯ 6 ತಾಲ್ಲೂಕಿ ಒಟ್ಟು 21 ಮತಗಟ್ಟೆ ಕೇಂದ್ರಗಳಲ್ಲಿ 18233 ಮತದಾರರು ಚುನಾವಣೆಗೆ ಹಕ್ಕು ಚಲಾಯಿಸಲಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಭವನದಲ್ಲಿ ಚುನಾವಣೆ ಕುರಿತು ಸಿದ್ದತೆಯ ಮಾಹಿತಿ ನೀಡಿದ ಅವರು, ಕಳೆದ ಪದವಿಧರ ಚುನಾವಣೆಯಲ್ಲಿ ಜಿಲ್ಲೆಯ 15 ಮತಗಟ್ಟೆ ಕೇಂದ್ರಗಳಿಂದ  5880.  ಮತದಾರರಿದ್ದರು. ಈ ಬಾರಿಯ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ 6 ತಾಲ್ಲೂಕಿನ 21 ಮತಗಟ್ಟೆ ಕೇಂದ್ರಗಳ 18ಸಾವಿರ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಆಯೋಗದ ನಿರ್ದೇಶನದಂತೆ ಜಿಲ್ಲೆಯ 21 ಮತಗಟ್ಟೆ ಕೇಂದ್ರಗಳ ಮಾಹಿತಿಯನ್ನು ಮತದಾರದಾರರಿಗೆ ಮತದಾರ ಚೀಟಿಯನ್ನು ವಿತರಣೆ ಮಾಡಲಾಗಿದೆ. ಮತದಾರ ಚೀಟಿಯಲ್ಲಿ ಮತಗಟ್ಟೆ ಮಾಹಿತಿ ಸಂಪೂರ್ಣ ವಿವರಣೆ ಮತ್ತು ಮತಗಟ್ಟೆ ಕೇಂದ್ರಗಳ ಕ್ಯೂಆರ್ ಕೋಡ್ (QR CODE) ಜಾರಿ ಮಾಡಲಾಗಿರುತ್ತದೆ. ಮತ ಚಲಾವಣೆ ಕುರಿತು ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಭಾರತ ಚುನಾವಣೆ ಆಯೋಗ ಮತ ಚಲಾವಣೆಗಾಗಿ ನೀಡಿರುವ ನೇರಳೆ ಬಣ್ಣದ ಸ್ಕೆಚ್ ಪೇನ್ ಗಳ ಮೂಲಕ ಮಾತ್ರ ಮತ ಚಲಾವಣೆ ಮಾಡಬೇಕಾಗಿರುತ್ತದೆ.ಮತದಾನ ದಿನದಂದು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಸಹಾಯವಾಣಿ ಕೇಂದ್ರ ಸಿಬ್ಬಂದಿರವರನ್ನು ನಿಯೋಜಿಸಲಾಗಿದೆ ಎಂದರು.  ಜಿಲ್ಲಾದ್ಯಾಂತ ಮತಗಟ್ಟೆ ಇರುವ ಪ್ರದೇಶದ ವ್ಯಾಪ್ತಿಯಲ್ಲಿ ಚುನಾವಣೆ ಶಾಂತ, ಮುಕ್ತ, ನ್ಯಾಯಸಮ್ಮತವಾಗಿ ನಡೆಯುವ ಸಂಬಂಧ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ ಎಂದರು.
 ವಿಧಾನ ಪರಿಷತ್ ಪದವಿಧರ ಮತಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಅನುದಾನಿತ ಹಾಗೂ ಅನುದಾನ ರಹಿತ ವಿಧ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯವಿಕ ಸಂಸ್ಥೆಗಳಲ್ಲಿ ಮತ್ತು ಇತರ ಖಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀದರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲಿರುವ ಮತದಾರರಿಗೆ ಜೂನ್ 03 ಸೋಮವಾರದಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಹಾಜರಿದ್ದರು.