ಹಬೋಹಳ್ಳಿ : ರೈತರಿಗೆ ವಿದ್ಯುತ್ ಸಂಪರ್ಕ ಕಡಿತ ಅಧಿಕಾರಿಗಳಿಗೆ ದಿಗ್ಬಂದನ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಮೇ.30 ತಾಲೂಕಿನ ತುಂಗಭದ್ರಾ ಹಿನ್ನೀರಿನ  ಪ್ರದೇಶದಲ್ಲಿ ಬರುವ ರೈತರ ಪಂಪ್ ಸೆಟ್ ಗಳಿಗೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ದಿಗ್ಬಂಧನ ವಿಧಿಸಿದರು..
ತಾ ಪಂ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ ಹಲವಾರು ವರ್ಷಗಳಿಂದ ಜೆಸ್ಕಾಂ ಇಲಾಖೆಯಿಂದ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲಾಗಿದೆ. ಈಗ ಏಕಾಏಕಿ ಅಧಿಕಾರಿಗಳು ಪೊಲೀಸರೊಂದಿಗೆ  ಆಗಮಿಸಿ ವಿದ್ಯುತ್ತು ಕಡಿತಗೊಳಿಸುವುದು ಯಾವ ನ್ಯಾಯ? ಈ ರೀತಿ ರೈತರಿಗೆ ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ. ರೈತ ವಿರೋಧಿ ನೀತಿಯನ್ನು ಕೂಡಲೇ ಕೈಬಿಡಬೇಕು. ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.
 ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯ ಜೂನಿಯರ್ ಇಂಜಿನಿಯರ್ ಪ್ರೇಮ್ ಕುಮಾರ್, ರೈತ ಮುಖಂಡ ಬನ್ನಿಕಲ್ ಷಣ್ಮುಖಪ್ಪ, ಆರ್ ಸೋಮಶೇಖರ್ ರೆಡ್ಡಿ ಮಹಮ್ಮದ್ ಸಾಹೇಬ್ ಜೆ ಕೆ ಬಸವರಾಜ್  ನವೀನ್ ಕುಮಾರ್ ಶ್ರೀನಿವಾಸ್ ಲೈನ್ ಮ್ಯಾನ್ ಎಸ್ ಕೊಟ್ರೇಶ್ ಇದ್ದರು.