ಮಲ್ಟಿ ನ್ಯಾಷನಲ್ ಕಂಪನಿಗ ಳಿಗೆ ಮಂಡಿಯೂರಿದ ಕಂದಾಯ ಇಲಾಖೆ.

ಸಂಜೆವಾಣಿ ವಾರ್ತೆ
ಜಗಳೂರು.ಮೇ.೩೦ :-  ಜಗಳೂರು ತಾಲೂಕಿನಾದ್ಯಂತ ವಿಂಡ್ ಪ್ಯಾನ್ ಗಳ ಹಾವಳಿ ಇಂದಿಗೂ ನಿಂತಿಲ್ಲ ಕಾರಣ ಇದಕ್ಕೆ ಸ್ಥಳೀಯ ದಲ್ಲಾಳಿಗಳ ಬೆಂಬಲವಿದೆ,ಅಧಿಕಾರಿಗಳ ಸಹಕಾರವಿದೆ, ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿಗಿದೆ, ರಕ್ಷಣೆ ಇದೆ,  ವಿಂಡ್ ಪ್ಯಾನ್ ಹೇರಳವಾಗಿ ಅಳವಡಿಸುತ್ತಿದ್ದರು ಅಧಿಕಾರಿ ವರ್ಗದವರು ಮಲ್ಟಿ ನ್ಯಾಷನಲ್ ಕಂಪನಿಗಳ ಮುಂದೆ ಏನು ಮಾಡದೆ ಅಸಹಾಯಕವಾಗಿ ಮಂಡಿಯೂರಿ ಕೂತಿವೆ.ಅಧಿಕೃತವೋ ಅನಾದಿಕೃತವೋ ಗೊತ್ತಿಲ್ಲ ಯಾವುದೋ  ಅಧಿಸೂಚನೆಯನ್ನು ಅಧಿಕಾರಿಗಳಿಗೆ ತೋರಿಸುತ್ತ ರೈತರ ಜಮೀನುಗಳನ್ನು ದಲ್ಲಾಳಿಗಳ ಮುಂದೆ ಬಿಟ್ಟು ಉಪಾಯದಿಂದ ಖರೀದಿಸುತ್ತಾ ರೈತರು ಕೇಳಿದಷ್ಟು ಹಣ ಬಿಸಾಕಿ ತನ್ನ ಪ್ರಭಾವ ಮುಂದಿಟ್ಟುಕೊಂಡು ನೋಂದಾಣಿ ಮಾಡಿಸಿ ಭೂ ಪರಿವರ್ತನೆ ಮಾಡಿಕೊಳ್ಳದೆ ದೊಡ್ಡ ದೊಡ್ಡ ಯಂತ್ರಗಳ ಮೂಲಕ ರೈತರ ಭೂಮಿ ಒಡಲನ್ನು ನೂರಾರು ಅಡಿಗಳ ಆಳ ಗುಂಡಿ ತೋಡಿ ವಿಂಡ್ ಪ್ಯಾನ್ ಅಳವಡಿಸುತ್ತಿ ದ್ದಾರೆ.ವಿಂಡ್ ಪ್ಯಾನ್ ಅಳವಡಿಸುವ ಜಮೀನಿಗೆ ದಾರಿ ಇಲ್ಲದಿದ್ದರೆ ಹಾದು ಹೋಗುವ ಜಮೀನಿನ ರೈತರನ್ನು ದೌರ್ಜನ್ಯ,ದಬ್ಬಾಳಿಕೆ ಯಿಂದ ಬೃಹತ್ ಗಾತ್ರದ ಬಾರಿ ವಾಹನಗಳಲ್ಲಿ ಬೃಹತ್ ಯಂತ್ರ ಗಳನ್ನು ಸಾಗಟ ಮಾಡುತ್ತಿದ್ದಾರೆ,ಇದಕ್ಕೆ ಅಡ್ಡಿ ಪಡಿಸಿದ ರೈತರಿ ಗೆ ಸ್ಥಳೀಯ ಮುಖಂಡರನ್ನ ಬಳಸಿ ದರ್ಪದಿಂದ ಎದುರಿಸುವ ಕೆಲಸ ನಡೆಯುತ್ತಿದೆ.‌ ಸ್ಥಳೀಯ ಮುಖಂಡರ ಗೋಡ್ಡು ಬೇದರಿಕೆ ಗೆ ಜಗ್ಗದ ಬಗ್ಗದ ರೈತರಿಗೆ ಬಿಡಿಗಾಸು ಕೊಟ್ಟು ದಾರಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.ನೂರಾರು ಅಡಿಗಳ ಅಳ ಗುಂಡಿ ತೋಡಿ ವಿಂಡ್ ಪ್ಯಾನ್ ಅಳ ವಡಿಸುತ್ತೀರುವುದು ರೈತರ ಜಮೀನುಗಳನ್ನು‌ ಕುತಂತ್ರದಿಂದ ಖರೀದಿಸುತ್ತೀರುವುದು, ಸರ್ಕಾರಕ್ಕೆ ಪಾವತಿಯಾಗಬೇಕಿದ ತೆರಿಗೆಯಿಂದ ಬಚಾವ್ ಆಗುತ್ತಿರುವುದು ನೋಂದಣಿ ಇಲಾಖೆ ಗೆ ತೆರಿಗೆ ಪಾವತಿಯಲ್ಲಿ ವಂಚಿಸುತ್ತಿರುವುದು ಭೂಮಿಯನ್ನು ಭೂ ಪರಿವರ್ತನೆ ಮಾಡಿಕೊಳ್ಳ‍ದೆ ದೊಡ್ಡ ದೊಡ್ಡ ಯಂತ್ರಗಳ ನ್ನು ದಾಸ್ತುನು ಮಾಡಿಕೊಳ್ಳುವುದು ಗಮನಿಸಿದರೆ ರಾಜ್ಯದಲ್ಲಿ ಜಾರಿ ಇರುವ ಕರ್ನಾಟಕ ಭೂ ಕಂದಾಯ ಅಧಿನಿಯಮಗಳ ಗಾಳಿಗೆ ತೋರಿದ್ದಂತಿದೆ.ಇಲ್ಲಿನ ಭೂಮಿಯನ್ನು ಖರೀದಿಸುತ್ತೀರುವುದು ನಮ್ಮ ರಾಜ್ಯದ ವರಲ್ಲ ಮಹಾರಾಷ್ಟ್ರ,ಹರಿಯಾಣ,ಆಂಧ್ರ ತೆಲಂಗಾಣ, ತಮಿಳು ನಾಡಿನ ರಾಜ್ಯದ ಮಲ್ಟಿ ನ್ಯಾಷನಲ್‌ ಕಂಪನಿಗಳು ಜಗಳೂರು ಭೂಮಿಗೆ ಲಗ್ಗೆ ಇಟ್ಟು ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ರೈತರ ಭೂಮಿ ಕರಗಿಸುತ್ತ ತಮ್ಮ ಪ್ಯಾನ್ ಹಾಗೂ ಸೋಲಾರಗಳ ಸಂಖ್ಯೆ ಹಾಗೂ ಆಧಾಯ ಹೆಚ್ಚು ಮಾಡಿಕೊಳ್ಳುತ್ತಿವೆ.ಕರ್ನಾಟಕದ ಅಧಿನಿಯಮ ರೈತರ ಜಮೀನಗಳ ಖರೀದಿಗೆ ಅಡಿಯಾಗುತ್ತೀರುವ ಕಾರಣಕ್ಕಾಗಿ ಸ್ಥಳೀಯರ ತಮ್ಮ ಪಟಲಾಮಗಳ ಹೆಸರಿಗೆ ರೈತರ ಜಮೀನನ್ನು ಜಿ.ಪಿ.ಎ ಮಾಡಿಕೊಂಡು ನಂತರ ಅವರಿಂದ ಕಂಪನಿಯ ಹೆಸರಿಗೆ ನೋಂದಾಯಿಸಿ ಕೊಳ್ಳುತ್ತೀರುವ ಮಾಹಿತಿ ಕಂದಾಯ ಇಲಾಖೆಗಿದ್ದರು. ಆದರ ವಿರುದ್ದ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದೆ.ಫಲವತ್ತಾದ ರೈತ ಕೃಷಿ ಭೂಮಿಯನ್ನು ಖರೀದಿಸಿ ರೈತರನ್ನು ಜಮೀನು ರಹಿತ ರೈತರನ್ನಾಗಿ ಮಾಡುತ್ತಿದ್ದರು ಜನಪ್ರತಿನಿಧಿ ಗಳು ಯಾರು ಧ್ವನಿ ಎತ್ತುತ್ತಿಲ್ಲ. ಕಳೆದ ಬಾರಿ ಮಾಜಿ ಶಾಸಕರ ಅವಧಿಯ ಆರಂಭ ವರ್ಷದಲ್ಲಿ ಲಗ್ಗೆ ಇಟ್ಟ ವಿಂಡ್ ಪ್ಯಾನ್ ಹಾಗೂ ಸೋಲಾರ್ ಕಂಪನಿಗಳು ರೈತರ ಜಮೀನು ಖರೀದಿಸಲು ಆರಂಭವಾಯಿತಿ ಈ ಸುದ್ದಿ ತಿಳಿದ ಮಾಜಿ ಶಾಸಕರು ರೈತರ ಜಮೀನು ಖರೀದಿಸಲು ಬಿಡುವುದಿಲ್ಲ ಎಂದು ಕಂಪನಿ ಯವರ ವಿರುದ್ಧವಾಗಿ ಹಲವು ಸಭೆಗಳಲ್ಲಿ ಅರ್ಭಟಿಸಿದ್ದರು ಆದರೆ ಐದು ವರ್ಷದಲ್ಲಿ ಕಂಪನಿಯವರ ವಿರುದ್ಧವಾಗಿ ಒಂದೇ ಒಂದು ಹೇಳಿಕೆಗಳನ್ನು ನೀಡಲಿಲ್ಲ.  ಜಗಳೂರು ಪಟ್ಟಣದ ಅಶ್ವಥ್ ಬಡವಾಣೆಯ ಮಟ್ಟಿಯ ಮೇಲೆ ರಾತ್ರಿ ಸಮಯದಲ್ಲಿ ನಿಂತು ಅಣಬೂರು ಹಿರೇಮಲ್ಲನಹೊಳೆ,ಹನುಮಂತಾಪುರ ಗ್ರಾ.ಪಂ ವ್ಯಾಪ್ತಿಯ ಜಮೀನುಗಳ ಕಡೆ ಕಣ್ಣು ಹಾಯಿಸಿದರೆ ವಿಂಡ್ಯಾ ಪ್ಯಾನ್ ಗಳ ತುದಿಗಳಿಗೆ ಅಳವಡಿಸಿರುವ ಕೆಂಪು ದ್ವೀಪಗಳು ಡಿಮ್ ಡಿಪ್ ಗಳು ಹೊಡೆಯುತ್ತಿರುವುದು ಗಮನಿಸಿದರೆ ಇದು ಯಾವ ಸ್ವರ್ಗ ಲೋಕವೂ ಎಂಬ ಭ್ರಮೆ ಉಂಟು ಮಾಡುವಲ್ಲಿ ಯಾವುದೆ ಅನುಮಾನವಿಲ್ಲ‌.ಹೀಗೆ ಜಗಳೂರು ತಾಲೂಕಿನಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಅಗಿದಿಯೋ ಬಿಟ್ಟಿದಿಯೋ ಗೊತ್ತಿಲ್ಲ ಆದರೆ ವಿಂಡ್ ಪ್ಯಾನ್ ಗಳ ಹಾವಳಿ ಮಾತ್ರ ಹೆಚ್ಚಾಗಿದೆ.ಇತ್ತಿಚ್ಚಿಗೆ ಹಿರೇಮಲ್ಲನ ಹೊಳೆ ಗ್ರಾಮಕ್ಕೆ ಹೊಂದಿಕೊಂಡು ಜಿಲ್ಲಾ ಹೆದ್ದಾರಿ ಸಮೀಪ ದಲ್ಲಿ ಅಕ್ರಮವಾಗಿ ಹಾಗೂ ಅನಾಧಿಕೃತವಾಗಿ ಕ್ಲೀನ್ ಮ್ಯಾಕ್ಸ್ ಎಂಬ ಕಂಪನಿಯ ವಿರುದ್ದ ತೀರುಗಿಬಿದ್ದು ಪ್ರತಿಭಟನೆ ನೆಡಸಿ ದ್ದರು ಪ್ರತಿಭಟಿಸಿದ ಕೆಲವರಿಗೆ ಬಾಯಿ ಮುಚ್ಚಿಸಲು ಲಕ್ಷ ಲಕ್ಷ ಹಣ ನೀಡಿದ್ದಾರೆ. ಹೋರಾಟಗಾರರಿಗೆ,ಪ್ರತಿಭಟನೆ ಮಾಡುವವರಿಗೆ ಲಕ್ಷ ಲಕ್ಷ ಚೆಕ್ ನೀಡುತ್ತೀರುವುದನ್ನು ಗಮನಿಸಿದರೆ ಜಗಳೂರು ತಾಲೂಕಿನಲ್ಲಿ ವಿಂಡ್ ಪ್ಯಾನ್ ಅಳವಡಿಕೆಗೆ ಜನ ಪ್ರತಿ ನಿಧಿಗಳಿಗೆ, ಅಧಿಕಾರಿಗಳಿಗೆ ಹೋರಾಟಗಾರರಿಗೆ ಪತ್ರಕರ್ತರಿಗೆ ಕಿಕ್ ಬ್ಯಾಕ್ ನೀಡಿರುವ ಸಂಶಯ ಸಾರ್ವಜನಿಕರಿಂದ ವ್ಯಕ್ತ ವಾಗಿದೆಯಲ್ಲದೆ ಅಕ್ರೋಶಕ್ಕೂ ಕಾರಣವಾಗಿದೆ.