ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಜಾನುವಾರುಗಳ ರಕ್ಷಣೆ
ಕಲಬುರಗಿ,ಮೇ.30-ಇಂಗಳಗಿ ಗ್ರಾಮದಿಂದ ಕಲಬುರಗಿಗೆ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಹಸು ಮತ್ತು ಒಂದು ಹೋರಿ ಸೇರಿ ಮೂರು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.
ಹಿಂದೂ ಜಾಗೃತಿ ಸೇನೆ ವಿದ್ಯಾರ್ಥಿ ಘಟಕ ಹಾಗೂ ಗೋರಕ್ಷಾ ಪ್ರಮುಖರಾದ ಪ್ರಶಾಂತ ನಗರದ ರಾಘವೇಂದ್ರ, ಪವನ್ ಹೊಸಮನಿ, ಅಭಿಷೇಕ ರಾಠೋಡ್ ಅವರು ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಎಎಸ್‍ಐ ಹಣಮಂತ ವಾಲಿ ಅವರು ಸ್ಥಳಕ್ಕೆ ಧಾವಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಸಾವಿರ ರೂ.ಮೌಲ್ಯದ ಒಂದು ಕೆಂಪು ಬಣ್ಣದ ಹಸು, 20 ಸಾವಿರ ರೂ.ಮೌಲ್ಯದ ಒಂದು ಬಿಳಿ ಹಣ್ಣದ ಹಸು ಮತ್ತು 25 ಸಾವಿರ ರೂ.ಮೌಲ್ಯದ ಒಂದು ಬಿಳಿ ಬಣ್ಣದ ಹೋರಿ ಮತ್ತು ಅಶೋಕ ಲೈಲ್ಯಾಂಡ್ ವಾಹನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.