ಬುದ್ದರ ಪಂಚಶೀಲ ಮಾರ್ಗಗಳ ಅನುಸರಣೆ ಪರಿನಿಬ್ಬಾಣಕ್ಕೆ ಹಾದಿ
ಕೋಲಾರ,ಮೇ.೩೦- ಗೌತಮ ಬುದ್ದರು ಸಿದ್ದಾರ್ಥನಾಗಿ ಜನಿಸಿದರು. ತಂದೆ ಶಾಕ್ಯರ ಗಣರಾಜ್ಯದ ಕಪಿಲ ವಸ್ತುವಿನ ರಾಜನಾಗಿದ್ದರು, ಬಾಲ್ಯದಲ್ಲಿ ಸಿದ್ದಾರ್ಥನನ್ನು ಕುರಿತುಈ ಮಗು ಸನ್ಯಾಸಿಯಾಗಿ ಮುಂದೆ ಈ ಲೋಕವನ್ನು ಆಳಬಲ್ಲ ವ್ಯಕ್ತಿಯಾಗುತ್ತಾನೆ. ಎಂಬ ಭವಿಷ್ಯ ವಾಣಿಯನ್ನು ಒಬ್ಬ ಮಹಾಮುನಿ ನುಡಿದಿದ್ದರು.ಇದನ್ನರಿತ ಶುದ್ದೋದನ ರಾಜ ತನ್ನ ಮಗ ಸಿದ್ದಾರ್ಥನಿಗಾಗಿ ಅರಮನೆಯಲ್ಲಿ ಎಲ್ಲಾ ರಾಜ ವೈಭೋಗಗಳನ್ನು ವ್ಯವಸ್ಥೆ ಮಾಡಿದ್ದರು ಬಾಲ್ಯದಿಂದಲೇ ಪ್ರಾಣಿದಯೆ, ಅಹಿಂಸಾ ಭಾವನೆ, ಧ್ಯಾನ, ತಪಸ್ಸು ಇವುಗಳ ಬಗ್ಗೆ ಬಾಲ್ಯದಲ್ಲೆ ಶಿಕ್ಷಣ ಪಡೆದಿದ್ದರು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪsಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ಡಿ.ಲಿಟ್ ರವರು ತಿಳಿಸಿದರು.ತಾಲ್ಲೂಕಿನ ಹಂಚಾಳ ಗೇಟ್ ಸಮೀಪದ ಫೀಲ್ಡ್ ಮಾಷಲ್ ಕೆ.ಎಂ.ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆಗಳ ಆವರಣದ ಬುದ್ಧ ವಿಹಾರದಲ್ಲಿ ೨೫೬೮ನೇ ಬುದ್ದಜಯಂತಿ ಪ್ರಯುಕ್ತಜ್ಯೋತಿ ಬೆಳಗಿಸಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಅವರು ಮಾತನಾಡಿ, ಗೌತಮ ಬುದ್ಧರು ರಾಜ್ಯವನ್ನು ತೊರೆಯಲು ಇತಿಹಾಸ ಪುಸ್ತಕದಲ್ಲಿನ ವಿಷಯಗಳಿಗೂ ಡಾ: ಬಿ.ಆರ್‌ಅಂಬೇಡ್ಕರ್‌ರವರು ಸುಧೀರ್ಘ ಅಧ್ಯಯನ ಮಾಡಿ ರಚಿಸಿರುವಂತಹ ಮಹಾಗ್ರಂಥ “ಬುದ್ಧ ಮತ್ತು ಆತನ ಧಮ್ಮ ಗ್ರಂಥದಲ್ಲಿನ ವಿಚಾರ ಧಾರೆಗಳ ಭಿನ್ನತೆಯನ್ನು ಬಿಡಿಸಿ ಹೇಳಿದರು.
ಸಿದ್ದಾರ್ಥನು ರಾಜ್ಯ ತೊರೆಯಲು ಅರಮನೆಯಿಂದ ಹೊರಗಡೆ ಹೊರಟಾಗ ಕಂಡ ಒಬ್ಬ ಮುದುಕ, ರೋಗಿ, ಶವ, ಸನ್ಯಾಸಿ ದೃಶ್ಯಗಳು ಆತನ ಮನಸ್ಸನ್ನು ಕಲಕಿ ರಾಜ್ಯ ತೊರೆದನು ಎಂದು ಉಲ್ಲೇಖಿತವಾಗಿರುತ್ತದೆ. ಡಾ:ಬಿ.ಆರ್. ಅಂಬೇಡ್ಕರ್ ಸಂಶೋಧನಾ ಗ್ರಂಥದಲ್ಲಿ ಸಿದ್ದಾರ್ಥನು ಶಾಕ್ಯ ರಾಜ್ಯಗಳನ್ನೊಳಗೊಂಡ ಸಂಘದ ಒಂದು ಪ್ರಮುಖ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು ಎಂದರು.
ಸಮಾರಂಭದಲ್ಲಿ ಆಡಳಿತಾಧಿಕಾರಿ ಎಸ್.ಲಕ್ಷ್ಮೀನಾರಾಯಣರೆಡ್ಡಿ, ಶ್ರೀ ಈಶ್ವರಮ್ಮಾಜಿ ಸ್ಕೂಲ್ ಮತ್ತು ಕಾಲೇಜ್‌ಆಫ್ ನರ್ಸಿಂಗ್‌ನ ಪ್ರಾಂಶುಪಾಲ ಜಾನ್ಸಿ ಪ್ರಸನ್ನ, ಐಟಿಐ ಕಾಲೇಜಿನ ಪ್ರಾಂಶುಪಾಲ ಭಾರತಿದಾಸನ್, ವಿ.ಎನ್. ನಾರಾಯಣಸ್ವಾಮಿ, ಸಿಬ್ಬಂದಿವರ್ಗ, ವಿದ್ಯಾರ್ಥಿ ವೃಂದ, ಪ್ರಾರ್ಥನೆ ಮುನಿಕೃಷ್ಣಪ್ಪ, ಸ್ವಾಗತ ವಿ.ಎನ್.ನಾರಾಯಣಸ್ವಾಮಿ, ನಿರೂಪಣೆ ಎಂ. ಪಾಪಣ್ಣ ನೆರವೇರಿಸಿಕೊಟ್ಟರು.