ಕಂಬ ಬದಲಾಯಿಸಲು ಭಕ್ತಾದಿಗಳು ಒತ್ತಾಯ
ಸಂಜೆವಾಣಿ ನ್ಯೂಸ್
ನಂಜನಗೂಡು,ಮೇ30:- ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಬೀಳುವ ಹಂತದಲ್ಲಿರುವ ಲೈಟ್ ಕಂಬಗಳನ್ನು ಬದಲಾಯಿಸದೆ ಕಂಡು ಕಾಣದಂತೆ ಓಡಾಡುತ್ತಿರುವ ಅಧಿಕಾರಿಗಳು.
ಪ್ರತಿದಿನ ಸಾವಿರಾರು ಭಕ್ತಾದಿಗಳು ಬರುವ ಶ್ರೀಕಂಠೇಶ್ವರ ದೇವಾಲಯದ ಸುತ್ತ ಲೈಟ್ ಕಂಬಗಳು ಬಿರುಕು ಬಿಟ್ಟು ಹಲವಾರು ತಿಂಗಳುಗಳು ಕಳೆದರೂ ಕೂಡ ಅಧಿಕಾರಿಗಳು ಕಂಡು ಕಾಣದಂತೆ ಪ್ರತಿ ದಿನ ಬೆಳಗ್ಗೆಯಿಂದ ಸಂಜೆವರೆಗೂ ಓಡಾಡುತ್ತಿರುತ್ತಾರೆ ಕಳೆದ ವಾರಗಳ ಹಿಂದೆ ಸತತ ಮಳೆಯಿಂದ ಹೆಚ್ಚಿನ ಅನಾಹುತ ಉಂಟಾಗಬಹುದಾಗಿತ್ತು ಆದರೂ ಕೂಡ ದೇವರ ದಯೆಯಿಂದ ಯಾವುದೆ ಅನಾಹುತ ಆಗಿಲ್ಲ ಮಳೆ ಕಡಿಮೆಯಾಗಿದೆ, ಈಗಲಾದರೂ ಕೂಡ ದೇವಸ್ಥಾನದ ಅಧಿಕಾರಿಗಳು ತಮ್ಮ ಮೊಂಡತನ ಬಿಟ್ಟು ಮುರಿದೆ ಬೀಳುತ್ತಿರುವ ಕಂಬಗಳನ್ನು ಬದಲಾಯಿಸಿದರೆ ಮುಂದೆ ಆಗುವ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದು ಎಂದು ಭಕ್ತಾದಿಗಳು ಸುತ್ತ ಕಟ್ಟಿರುವ ಕಟ್ಟೆಗಳು ಬಿರುಕು ಬಿಟ್ಟು ಮುರಿದು ಬೀಳುತ್ತದೆ ಕಂಬಗಳ ಪಕ್ಕದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ಓಡಾಡುತ್ತಿರುತ್ತಾರೆ ಏನಾದರೂ ಮುಟ್ಟಿದರೆ ಜೀವಕ್ಕೆ ಕುತ್ತು ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಚ್ಚಿನ ಅನಾಹುತ ಆಗುವುದನ್ನು ತಡೆದು ಕಂಬಗಳನ್ನು ಬದಲಾಯಿಸಿ ಭಕ್ತಾದಿಗಳನ್ನು ಕಾಪಾಡಿ.