ಕೋಟಿ ಒಡೆಯ ಮಹದೇಶ್ವರರ ಹುಂಡಿ ಎಣಿಕೆ
ಸಂಜೆವಾಣಿ ವಾರ್ತೆ
ಹನೂರು ಮೇ 30 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 30 ದಿನಗಳಲ್ಲಿ ಸುಮಾರು 2 ಕೋಟಿ, 58 ಲಕ್ಷ. 44 ಸಾವಿರ ರೂ. ಸಂಗ್ರಹವಾಗಿದೆ.
ಮಲೆ ಮಾದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಯಿತು. ದಿನಾಂಕ 29.04.2024 ರಿಂದ 28.05.2024 ರವರೆಗಿನ 30 ದಿನಗಳಲ್ಲಿ ಸಂಗ್ರಹವಾದ ಹುಂಡಿ ಹಣ ಒಟ್ಟು ಮೊತ್ತ 2 ಕೋಟಿ 58. ಲಕ್ಷ, 44 ಸಾವಿರ ರೂ.ಗಳು ಹಾಗೂ ಚಿನ್ನ 93 ಗ್ರಾಂ, ಬೆಳ್ಳಿ 3 ಕೆಜಿ, 350 ಗ್ರಾಂ. ಹುಂಡಿಯಲ್ಲಿ ದೊರೆತಿದೆ.ಎಣಿಕೆ ಇದಾಗಿದೆ. ಇದರಲ್ಲಿ ಚಲಾವಣೆಯಾಗದ 2,000 ಮುಖಬೆಲೆಯ 25 ನೋಟುಗಳು ದೊರೆತಿದೆ.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬೆಳಿಗ್ಗೆ 7.00 ಗಂಟೆಯಿಂದ ಸಾಲೂರು ಬ್ರಾಹ್ಮಠಾಧ್ಯಕ್ಷರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳರವರ ದಿವ್ಯಸಾನಿದ್ಯದಲ್ಲಿ ಹಾಗೂ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ರವರ ನೇತೃತ್ವದಲ್ಲಿ ಹುಂಡಿ ಪರ್ಕಾವಣೆ ಕಾರ್ಯ ಪ್ರಾರಂಭವಾಗಿದ್ದು. ರಾತ್ರಿ 8:30ರ ವೇಳೆಯಲ್ಲಿ ಮುಕ್ತಯಗೊಂಡಿದೆ.
ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರ ನಾಗೇಶ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿ ಮುಜರಾಯಿ ಶಾಖೆಯ ಕು. ಶ್ವೇತಾ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಬ್ಯಾಂಕ್ ಆಪ್ ಬರೋಡ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.