ಆಧುನಿಕ ತಂತ್ರಜ್ಞಾನದಿಂದ ಉದ್ಯಮ ಅಭಿವೃದ್ಧಿ : ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ
ಸಂಜೆವಾಣಿ ವಾರ್ತೆ
ಔರಾದ್ :ಮೇ.30: ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವ ಮೂಲಕ ಅಧಿಕ ಲಾಭ ಗಳಿಸಲು ಮುಂದಾಗಬೇಕು, ಆಧುನಿಕ ತಂತ್ರಜ್ಞಾನದಿಂದ ಉದ್ಯಮ ಅಭಿವೃದ್ಧಿಯಾಗಲು ಸಾಧ್ಯ ಎಂದು ಶ್ರೀ ದತ್ತ ಸಾಯಿ ಶನೇಶ್ವರ ದೇವಸ್ಥಾನದ ಅಧ್ಯಕ್ಷರಾದ ಪೂಜ್ಯ ಷ.ಬೃ ಶಂಕರಲಿಂಗ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡ ಟೆಕ್ವೇಸ್ ಇನ್ಪೋಸಿಸ್ಟಮ್ ಪ್ರೈ.ಲಿಮಿಟೆಡ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಔರಾದ್ ಪಟ್ಟಣದಲ್ಲಿ ಇಂತಹ ಸಂಸ್ಥೆಗಳು ಅಗತ್ಯವಿದ್ದು, ಎಲ್ಲ ಕ್ಷೇತ್ರದಲ್ಲಿಯೂ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದರು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಅಲ್ಪ ಅವಧಿಯಲ್ಲಿ ಅಧಿಕ ಕೆಲಸ ಮಾಡಲಿದೆ. ಆದ್ದರಿಂದ ಇಂತಹ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಉದ್ಯಮಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಎಲ್ಲ ಕ್ಷೇತ್ರದಲ್ಲಿಯೂ ಅವಶ್ಯಕತೆಯಿದೆ. ವಿಕ್ರಮ್ ರಾಠೋಡ್ ಅವರು ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿ ಇಲ್ಲಿಯ ಪದವೀಧರರಿಗೆ ಉದ್ಯೋಗ ದೊರಕಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಮುಖ್ಯಸ್ಥ ಬಸವರಾಜ ಶೆಟಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಫ್ಟ್ವರ್ವ ಡೆವಲಪರ್ ವಿಕ್ರಮ್ ರಾಠೋಡ್ ಪ್ರಾಸ್ತವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿ ಬಾಬು ಪವಾರ್, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲಾ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟಕಾರ್, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ಶಿವಕುಮಾರ ಶೆಟಕಾರ್, ಸಂಜುಕುಮಾರ ಕಂಠಾಳೆ, ರಾಜಕುಮಾರ ಹಂಬಲಪೂರೆ, ಭೀಮಾಶಂಕರ ಜಿರಗೆ, ಗುರುನಾಥ ವಡ್ಡೆ, ಬಸವರಾಜ ಹಳ್ಳೆ, ನಾಗಸೇನ ತಾರೆ, ನಿರ್ಮಲಾ ಪಿಯು ಕಾಲೇಜಿನ ಸಂಸ್ಥಾಪಕ ಅಮರ ಸೇರಿದಂತೆ ಅನೇಕರಿದ್ದರು. ಶಿಲ್ಪಾ ಬಿ. ಶೆಟಕಾರ್ ಸ್ವಾಗತಿಸಿ, ನಿರೂಪಿಸಿದರು.