ಸ್ವಚ್ಛತೆ ಇಟ್ಟುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ :ಸೆ.24 ತಾಲ್ಲೂಕಿನ ಕಡಲಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಆನಂದ ದೇವನಹಳ್ಳಿ ಗ್ರಾಮದಲ್ಲಿ “ ಸ್ವಚ್ಚತೆಯ ಸೇವೆ  “ ಕಾರ್ಯಕ್ರಮದ ಅಂಗವಾಗಿ “ ಸ್ವಭಾವ ಸ್ವಚ್ಚತೆ , ಸಂಸ್ಕಾರ ಸ್ವಚ್ಚತೆ “ ಎಂಬ ಕಾರ್ಯಕ್ರಮವನ್ನು ಶಾಸಕ  ಕೆ. ನೇಮಿರಾಜ್ ನಾಯ್ಕ ಚಾಲನೆ ನೀಡಿದರು.
  ನಂತರ ಅವರು ಮಾತನಾಡಿ  ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರ ವರೆಗೆ 15 ದಿನಗಳ ಕಾಲ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಬೀದಿಗಳು, ದೇವಸ್ಥಾನ , ಶಾಲೆಗಳು, ರಸ್ತೆಗಳು ಇತರೆ ಎಲ್ಲಾ ಕಡೆಗಳಲ್ಲಿ ಸ್ವಚ್ಚತೆಯನ್ನು ಕೈಗೊಳ್ಳಬೇಕು ಇದ್ದರಿಂದ ನಮ್ಮ ಆರೋಗ್ಯ , ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಈ ವೇಳೆ  ಗ್ರಾ ಪಂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿ ಸತ್ಕರಿಸಲಾಯಿತು.
 ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾಪಂ  ಅಧ್ಯಕ್ಷೆ  ಲತಾ ರಾಜ್ ಕುಮಾರ್, ವಹಿಸಿದ್ದರು,
 ಈ ಸಂದರ್ಭದಲ್ಲಿ ತಾ ಪಂ ಇ ಒ  ಜಿ.ಪರಮೇಶ್ವರ ,  ನಾಗರಾಜ ನಾಯ್ಕ, ತಾಲ್ಲೂಕು ಯೋಜನಾಧಿಕಾರಿಗಳು, ಮುಖಂಡರಾದ ವೈ ಮಲ್ಲಿಕಾರ್ಜುನ, ಬ್ಯಾಟಿ ನಾಗರಾಜ್, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಿಡಿಓ ಕುಮಾರಿ ಸುಜಾತ ಅಂಗಡಿ, ಕಾರ್ಯದರ್ಶಿ,  ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಮುದ್ದು ಮಕ್ಕಳು, ಗ್ರಾಮಸ್ಥರು ಸ್ಚಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.
One attachment • Scanned by Gmail