ಸುರೇಶ್‌ಗೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ
ಬೆಂಗಳೂರು, ಸೆ.೨೪-ಸಮಾಜ ಸೇವೆಯಲ್ಲಿ ಸದಾ ತೊಡಗಿಸಿಕೊಂಡು ಬಡವರ ಪರ ಹೋರಾಟಗಳನ್ನು ಮಾಡುತ್ತಾ ಯುವಕರಿಗೆ ಪ್ರೋತ್ಸಾಹ ನೀಡುತ್ತಿರುವ ಕುರುಡುಸೋಣ್ಣೇನಹಳ್ಳಿ ಗ್ರಾಮದ ಸುರೇಶ್(ಸೂರಿ) ಅವರು ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುರೇಶ್ ರವರು ಮೂಲತಃ ಮಹದೇವಪುರ ವಿಧಾನಸಭಾ ಕ್ಷೇತ್ರದ ಕುರುಡು ಸೊಣ್ಣೇನಹಳ್ಳಿ ಗ್ರಾಮದದವರಾಗಿದ್ದು, ಬಡಕುಟುಂಬದಿಂದ ಬೆಳೆದು ಬಂದವರು, ಬಡವರ ಕಷ್ಟಗಳ ಮಧ್ಯೆ ಬೆಳೆದಿರುವ ಇವರು ನಾವು ಪಟ್ಟಿರುವ ಕಷ್ಟಗಳು ಸುತ್ತಮುತ್ತಲಿನ ಬಡ ಜನರು ಪಡಬಾರದೆಂದು ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ.
ಸುಮಾರು ೧೫ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಸುರೇಶ್‌ರವರು ಸರ್ಕಾರಿ ಶಾಲೆಗಳಿಗೆ ೨೦ ಸಾವಿರ ತಟ್ಟೆ, ೨೦ ಸಾವಿರ ಗ್ಲಾಸ್‌ಗಳು, ನೋಟ್‌ಪುಸ್ತಕಗಳು ನೀಡಿದ್ದಾರೆ. ಅಲ್ಲದೆ ಬಡ ಮಕ್ಕಳ ಶಾಲಾ ಶುಲ್ಕವನ್ನೂ ಸಹ ಇವರೆ ಕಟ್ಟಿದ್ದಾರೆ.
ವಿಕಲಚೇತನರಿಗೆ ಸ್ಟಿಕ್ , ಬಡವರಿಗೆ ಬೆಡ್‌ಶೀಟ್‌ಗಳು ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಯುವಕರರ ಪ್ರೋತ್ಸಾಹಹಿಸುವ ಉದ್ದೇಶದಿಂದ ಅವರಿಗೆ ಕ್ರೀಡಾ ಸಾಮಾಗ್ರಿಗಳನ್ನು ನೀಡಿ ಆಸಕ್ತ ಕ್ರೀಡಾಪಟುಗಳು ಉನ್ನತ ಮಟ್ಟಕ್ಕೆ ಬೆಳೆಯಲು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ.
ಐಎಎಸ್, ಐಪಿಎಸ್ ಓದುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ, ಸಾವಿರಾರು ಸಸಿಗಳನ್ನು ನೆಟ್ಟು, ಪೋಷಿಸಲು ಯುವಕರಿಗೆ ಕರೆ ನೀಡಿದ್ದಾರೆ, ದೇವಾಲಯಗಳ ಅಭಿವೃದ್ಧಿಗೆ ಸಹಾಯದನ ಮಾಡಿದ್ದಾರೆ, ಬಡವರಿಗೆ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.