ಗಣಪತಿ ಪ್ರತಿಷ್ಠಾಪಿಸಿ ಒಗಟ್ಟು ಪ್ರದರ್ಶಿಸಿದ ಕೊರಳೂರಿನ ಜನ
ಹೊಸಕೋಟೆ.ಸೆ.೨೪-ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಳೂರಿನಲ್ಲಿ ೪೯ ವರ್ಷಗಳಿಂದ ಗೌರಿ ಗಣಪತಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದು ಹಿರಿಯರೆಲ್ಲಾ ಒಗ್ಗಟ್ಟಿನಿಂದ ಮಾತುಕತೆ ನಡೆಸುತ್ತಿದ್ದರು.
ಇದೀಗ ನಾಲ್ಕಾರು ಕಡೆ ಕೂರಿಸುತಿದ್ದ ಪದ್ಧತಿಗೆ ಇತಿಶ್ರಿ ಹಾಡಿ ಕಳೆದ ಮೂರು ವರ್ಷಗಳಿಂದ ಅರಳಿ ಕಟ್ಟೆ ಗೆಳೆಯರ ಬಳಗವೆಂದು ನಾಮಕರಣ ಮಾಡಿ ಗ್ರಾಮದ ನಾಲ್ಕು ತಂಡಗಳು ಒಂದೇ ಕಡೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿನಿತ್ಯ ಹದಿನೈದು ದಿನಗಳ ಕಾಲ ನಿತ್ಯ ಪೂಜೆ ಪ್ರಸಾದ ವಿತರಿಸಿ ಮಹಿಳೆಯರಿಗೆ ಯುವಕರಿಗೆ ಮಕ್ಕಳಿಗೆ ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು. ಎಂದು ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ ಅವರು ತಿಳಿಸಿದರು.