ಬಾವಿ ನವೀಕರಣ ಕಾಮಗಾರಿಯ ಸಾಮಗ್ರಿ ಕಳವು
ಕಲಬುರಗಿ,ಮೇ.29-ಶಾಂತಿ ನಗರ ಬಡಾವಣೆಯಲ್ಲಿರುವ ಜೀವ ಬಾವಿಯ ನವೀಕರಣ ಕಾಮಗಾರಿಗೆಂದು ತಂದು ಇರಿಸಲಾಗಿದ್ದ 48 ಸಾವಿರ ರೂ.ಮೌಲ್ಯದ ಸಾಮಗ್ರಿಗಳು ಕಳವಾಗಿವೆ ಎಂದು ದರಿಯಾಪುರ ಜಿಡಿಎ ಲೇಔಟ್‍ನ ಪ್ರಥಮ ದರ್ಜೆ ಗುತ್ತಿಗೆದಾರರಾದ ಯಮನಪ್ಪ ಪವಾರ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬಾವಿ ನವೀಕರಣ ಕಾಮಗಾರಿ ಕೆಲಸಕ್ಕಾಗಿ ತಂದು ಇರಿಸಲಾಗಿದ್ದ 15 ಸಾವಿರ ರೂ.ಮೌಲ್ಯದ 15 ಸಾವಿರ ರೂ.ಮೊತ್ತದ ವೆಲ್ಡಿಂಗ್ ಮಷಿನ್, 8 ಸಾವಿರ ರೂ.ಮೌಲ್ಯದ ರಾಡ್ ಕಟಿಂಗ್, 20 ಸಾವಿರ ರೂ.ಮೌಲ್ಯದ ಹೆಚ್.ಪಿ.-ಸಬ್ ಮರ್ಷಿಬಲ್ 2 ಮೋಟಾರ್, 3 ಸಾವಿರ ರೂ.ಮೌಲ್ಯದ ಹ್ಯಾಂಡ್ ಕಟಿಂಗ್ ಮಷೀನ್ ಸೇರಿ 48 ಸಾವಿರ ರೂ.ಮೌಲ್ಯದ ಸಾಮಗ್ರಿ ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.