ವಿದ್ಯೆ ಎಂಬ ಸಂಪತ್ತು ಬಹಳ ಅಮೂಲ್ಯ :ನಾಗಮ್ಮ ಧೂಳೆ
ಬೀದರ್: ಮೇ.29-ವಿದ್ಯೆ ಎಂಬ ಸಂಪತ್ತು ಬಹಳ ಅಮೂಲ್ಯವಾದದ್ದು ಅಂತಹ ವಿದ್ಯೆಯನ್ನು ಹಲವಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯಲು 1983ರಲ್ಲಿ ಗಡಿ ಭಾಗದ ಬಿದರ್ ಜಿಲ್ಲೆಯಲ್ಲಿ ತಲೆಯೆತ್ತಿ ನಿಂತ ಶಾಲೆಯೇ ಮಾತೋಶ್ರೀ ನಾಗಮ್ಮ ಹಿರಿಯ ಪ್ರಾಥಮಿಕ ಶಾಲೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗ ಇಚ್ಚಿಗೆ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ನಾಗಮ್ಮ ಬಸಪ್ಪ ಧೂಳೆ ನುಡಿದರು.
ಶಿಕ್ಷಣವೆಂದರೆ ಕೇವಲ ವಿದ್ಯಾರ್ಥಿಗಳ ತಲೆಯಲ್ಲಿ ವಿಷಯಗಳನ್ನು ತುಂಬುವುದಲ್ಲ ಮಕ್ಕಳ ಬುದ್ಧಿವಂತಿಕೆಯನ್ನು ಹರಿತಗೊಳಿಸುವ ವಿಶ್ಲೆಷಣೆ ಸಾಮಥ್ರ್ಯವನ್ನು ವಿಸ್ತರಿಸುವ ವಿವೇಚನೆಯನ್ನು ತುರುಕುಗೊಳಿಸುವ ಕ್ರಿಯೆ ನಡೆಯುವುದು ಎಂದು ಕಾರ್ಯದರ್ಶಿ ಸುವರ್ಣ ಶಿವರಾಜ ಧೂಳೆ ಹೇಳಿದರು.
ಶಿಕ್ಷಕ ಎಂ. ಎ .ರೆಹಮಾನ್ ಮಾತನಾಡುತ್ತಾ, ನನ್ನ ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಬಾಳುತ್ತಿರುವುದು ನನಗೆ ಖುಷಿ ತಂದಿದೆ ಎಂದು ನುಡಿದರು .
ಇನ್ನೋರ್ವ ಶಿಕ್ಷಕ ಬಾಲಾಜಿ ಬಿರಾದಾರ ಮಾತನಾಡುತ್ತಾ ಮೌಲ್ಯಯೂತ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ವ್ಯಕ್ತಿಯ ಜೀವನದಲ್ಲಿ ಮಹತ್ವವಾದುದು . ಶಾಲೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಶಿವರಾಜ್ ಧೂಳೆ ಈ ಶಾಲೆಗೆ ಅಡಿಪಾಯ ಹಾಕಿ ಬೀದರ್ ನಗರದಲ್ಲಿ ಹಲವಾರು ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣ ಪಡೆಯಲು ಅನುವು ಮಾಡಿಕೊಟ್ಟವರು ಎಂದು ಕೃತಜ್ಞತೆ ಸಲ್ಲಿಸಿದರು. ಮಹೇಶ ಧೂ ಳೆ ಪ್ರಾಸ್ತಾವಿಕ ಮತನಾಡಿದರು.
ಶಿಕ್ಷಕರಾದ ಶ್ರೀಮತಿ ಪ್ರೇಮಲತಾ ಹಿರೇಮಠ, ರೇಣುಕಾ ಬುಯ್ಯ, ಶಶಿಕಲಾ ಚಿಟಗುಪ್ಪಿಕಾರ, ಚಂದ್ರಕಾಂತ್ ಸೇಳ್ಕೆ, ಸಂಗಪ್ಪ ಸೂರ್ಯವಂಶಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಮಹೇಶ ಧೂ ಳೆ, ವೆಂಕಟೇಶ್ ಧುಮಾಳೆ, ಶ್ವೇತಾ .ರಮೇಶ. ರಾಜಕುಮಾರ.ಸತೀಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.. ಇದೇ ಸಂದರ್ಭದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸಂಘರ್ಷ ಧೂಮಾಲ್, ಮಾರುತಿ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಕೋಮಲ ಶೀಲವಂತ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಸಾಹಿತಿ ಮಾಣಕಾದೇವಿ ಪಾಟೀಲ್ ಮತ್ತು ಡಾ. ಸೂರ್ಯಕಾಂತ್ ಪರಶೆಟ್ಟಿ ಸ್ವಾಗತಿಸಿದರು. ವಿನೋದ ಹೊನ್ನಾ ನಿರೂಪಿಸಿದರು ಪ್ರಕಾಶ ವಂದಿಸಿದರು. ಮಹಾರುದ್ರ. ಸುನೀಲ ಗಂದಿಗುಡೆ, ಮೌಲಾನಾ. ಓಂಕಾರ್. ಜಗನ್ನಾಥ .ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.