ಹಣ ದ್ವಿಗುಣ ಮಾಡುವುದಾಗಿ ಹೇಳಿ 4 ಲಕ್ಷ ರೂ.ವಂಚನೆ
ಕಲಬುರಗಿ,ಮೇ.29-ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 4 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ಕರ್ಷ ವರ್ಧಮಾನ, ಸಾವಿತ್ರಿ ವರ್ಧಮಾನ, ಸುಧಾ ಠಾಕೂರ, ಅಮಿತ್ ಸಿಂಗ್ ಠಾಕೂರ, ವಿಜಯಸಿಂಗ್ ಅಲಿಯಾಸ್ ಸನ್ನಿ ಹಜಾರೆ, ದೀಪಾ ಹಜಾರೆ ಅವರು ಸೇರಿ ಒಂದು ವರ್ಷದಲ್ಲಿ ಎರಡು ಪಟ್ಟು ಹಣ ಕೊಡುವುದಾಗಿ ಹೇಳಿ 4 ಲಕ್ಷ ರೂ.ವಂಚನೆ ಮಾಡಿದ್ದಾರೆ ಎಂದು ಫಿಲ್ಟರ್‍ಬೆಡ್ ರಸ್ತೆಯ ಜಿಡಿಎ ಕಾಲೋನಿಯ ಮೋಹನಕುಮಾರ ರಾಠೋಡ್ ಎಂಬುವವರು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.