ಭಾವನೆ ಅರಳಿಸುವ ಲಲಿತ ಕಲೆ:ಡಾ. ಡಿ.ಎ ಉಪಾಧ್ಯ
ಕಲಬುರಗಿ,ಮೇ. 29: ಲಲಿತಕಲೆಗಳು ಮನುಷ್ಯನ ಭಾವನೆಗಳನ್ನು ಅರಳಿಸುತ್ತವೆ ಎಂದು ಬರಹಗಾರ ಹಾಗೂ ಹಿರಿಯಚಿತ್ರಕಲಾವಿದ ಡಾ. ಡಿ.ಎ ಉಪಾಧ್ಯ ಹೇಳಿದರು.
ನಗರದ ಕಾಳೆ ಲೇಔಟ್‍ನಲ್ಲಿರುವ ದಿ ಆಟ9 ಇಂಟಿಗ್ರೇಶನ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆಟ9 ಗ್ಯಾಲರಿಯಲ್ಲಿ ದೃಶಕಲೆಗಳು ಒಂದು ತೌಲನಿಕ ಅಧ್ಯಯನ ಎಂಬ ವಿಷಯದ ವಿಚಾರ ಸಂಕಿರಣ ಮತ್ತು ಚಿತ್ರ ಕಲಾ ಪ್ರದಶ9ನ ಉದ್ಘಾಟಿಸಿ ಮಾತನಾಡಿದರು. ಕಲೆಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳೆಂದರೆ ಪ್ರದಶ9ನ ಕಲೆ, ಔಪಯೋಗಿಕ ಕಲೆ, ಪ್ರಚಾರಕ ಕಲೆ,ಲಲಿತಕಲೆಗಳು ಹಾಗೇ ವಾಸ್ತುಶಿಲ್ಪ ಲಲಿತಕಲೆಗಳಲ್ಲಿ ಚಿತ್ರಕಲೆ, ಶಿಲ್ಪಕಲೆ, ಸಂಗೀತ ಹಾಗೂ ಸಾಹಿತ್ಯ ಕಲೆಗಳು ಸೇರಿವೆಯೆಂದು ಹೇಳಿದರು.ಉಪನ್ಯಾಸದನಂತರ ವಿದ್ಯಾಥಿ9ಗಳ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ಕಾಯ9ಕ್ರಮದಲ್ಲಿ ಕಲಾವಿದರು ಮಹಾವಿದ್ಯಾಲಯದ ವಿದ್ಯಾಥಿ9ಗಳು ಭಾಗವಹಿಸಿದ್ದರು. ಚಿತ್ರಕಲಾಮಹಾವಿದ್ಯಾಲಯ ಪ್ರಾಂಶುಪಾಲ ಎಂ,ಹೆಚ್,ಬೆಳಮಗಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿ ಹಿರಿಯ ಚಿತ್ರಕಲಾವಿದಮೋಹನ ಸೀತನೂರ ವೇದಿಕೆ ಮೇಲೆ ಇದ್ದರು. ಬಿ.ಎನ್‍ಪಾಟೀಲ ಸ್ವಾಗತಿಸಿದರು. ಪರಶುರಾಮ,ಪಿ. ಬಿ.ವಿಕಮಾಜಿ. ನಿಂಗಪ್ಪಾ.ಡಿ.ಕೇರಿ. ಶರಣಗೌಡಪಾಟೀಲ, ಆನಂದ ಸಂಗೋಳಗಿ, ವೀರಪ್ಪರಾಜೋಳಿ ಹಾಗೂ ಮಹಾನಂದ ಭಾಗವಹಿಸಿದರು. ಡಾ ಅಶೋಕ ಶಟಕಾರ ನಿರೂಪಿಸಿದರು.