ರಸ್ತೆ ಅಪಘಾತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ. ಮೇ. 29: ಬೀದರ ಜಿಲ್ಲೆಯಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆ ಮತ್ತು ಗ್ರಾಮೀಣ ರಸ್ತೆಗಳ ಮೇಲೆ ಇರುವ ಕಪ್ಪು ಜಾಗಗಳನ್ನು “Black Spot” ಗುರುತಿಸಿ ಅಂತಹ ಸ್ಥಳಗಳಲ್ಲಿ ಸೈನ್ ಬೋರ್ಡಗಳನ್ನು ಅಳವಡಿಸುವ ಮೂಲಕ ರಸ್ತೆಗಳಲ್ಲಿ ಅಪಘಾತ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ವಾಹನದ ಮೇಲೆ ಪುಟ್ಟ ಮಕ್ಕಳು (9 ತಿಂಗಳಿನಿಂದ 4ವರ್ಷಗಳ) ವರೆಗೆ ಇರುವವರನ್ನು ಕೂಡಿಸಿಕೊಂಡು ಹೋಗುವಾಗ ರಸ್ತೆ ಸುರಕ್ಷತಾ ಸರಂಜಾಮ ಸೆಪ್ಟಿ ಹಾರನೆಸ್ ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅಂತಹ ಸಮಯದಲ್ಲಿ ವಾಹನವನ್ನು 40 ಕಿ.ಮೀ ಪ್ರತಿ ಗಂಟೆಗಿಂತ ಮೇಲ್ಪಟ್ಟು ಚಲಾಯಿಸಬಾರದು. ಅಡ್ಡ ರಸ್ತೆಗಳು ಮುಖ್ಯ ರಸ್ತೆಗಳಿಗೆ ಸೇರುವ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗುತ್ತಿದ್ದು, ಆಟೋ ಚಾಲಕರು ಹಾಗೂ ಶಾಲಾ ಬಸ್ಸುಗಳ ಚಾಲಕರಲ್ಲಿ ರಸ್ತೆ ಸುರಕ್ಷತಾ ಜಾಗ್ರತಿ ಮೂಡಿಸಲು ಕ್ರಮಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚನ್ನಬಸವಣ್ಣಾ ಎಸ್.ಎಲ್. ಅವರು ಮಾತನಾಡಿ, 2023ರ ಮೇ ಯಿಂದ 2024ರ ಮೇ ವರೆಗೆ ಒಟ್ಟು 316 ಜನ ವಾಹನ ಸವಾರರು ಗಾಯಾಳುಗಳಾಗಿದ್ದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಾಲಯಿಸಬೇಕು. ಹಾಗೂ ಹಿಂಬದಿ ಸವಾರರಿಗೂ ಸಹ ಹೆಲ್ಮೆಟ್ ಧರಿಸಬೇಕೆಂದು ಹೇಳಿದರು.
ಶಾಲಾ, ಕಾಲೇಜುಗಳ ವಾಹನಗಳಿಗೆ ಜಿಪಿಎಸ್ ಹಾಗೂ ಸಿಸಿ ಕ್ಯಾಮರಗಳನ್ನು ಆಳವಡಿಕೆಗೆ ಕ್ರಮವಹಿಸಲಾಗಿದೆ. ಅಟೋ ಚಾಲಕರು ಹೆಚ್ಚಿನ ಮಕ್ಕಳನ್ನು ಕೊಡಿಸಿಕೊಂಡು ಹೋಗಬಾರದು, ಹೋದಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುದು ಎಂದು ಹೇಳಿದರು.
ಈ ಸಭೆಯಲ್ಲಿ ಬೀದರ ಲೋಕೊಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಶಂಕರ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರಿಕಾಂತ ಚಿಮ್ಮಕೊಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ, ಬೀದರ ನಗರಸಭೆ ಆಯುಕ್ತ ಶಿವಪ್ಪ ಅಂಬಿಗೇರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.