ಬೇಸಿಗೆ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ಬೆಳವಣಿಗೆ : ಹಾಸಿಂಪೀರ ವಾಲಿಕಾರ
ವಿಜಯಪುರ,ಮೇ.29: ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುವದರಿಂದ ಮಕ್ಕಳಲ್ಲಿರುವ ಸೃಜನಶೀಲತೆ ಹಾಗೂ ವ್ಯಕ್ತಿತ್ವ ಬೆಳವಣಿಗೆ ಹೊಂದಲು ಸಾಧ್ಯ. ವಿದ್ಯೆಯೊಂದಿಗೆ ಮಗುವಿನ ಸವಾರ್ಂಗೀಣ ಅಭಿವೃದ್ಧಿಗೆ ಶಿಬಿರಗಳು ಮಹತ್ವ ಪಡೆದುಕೊಂಡಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ಬಿ ಎಲ್ ಡಿ ಈ ಆಸ್ಪತ್ರೆ ರಸ್ತೆಯ ಶಿವಾಲಯ ಸಭಾಂಗಣದಲ್ಲಿ ಪಿಟ್ನೆಸ್ ಕಾರ್ನರ ಹಾಗು ಬೇಸ್ಟ ಮಾರ್ಟಿಯಲ್ ಕಲಾ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಾಸಿಂಪೀರ ವಾಲಿಕಾರ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ಬೇಸಿಗೆ ಶಿಬಿರಗಳು ಯಶಸ್ವಿಯಾಗಿ ಮಾಡಿದ್ದು ಮಕ್ಕಳ ಕ್ರೀಯಾಶೀಲ ಚಟುವಟಿಕೆ ಪಾಲಕರು ಕಣ್ಣಾರೆ ಕಂಡು ಸಂತೋಷಗೊಂಡಿರುವದು ಪ್ರಶಂಸನೀಯ ಎಂದರು.
ಪಿಟ್ನಸ ಕಾರ್ನರ ಮುಖ್ಯಸ್ಥ ಜಗದೀಶ ಗುಳೇದಗುಡ್ಡ ಮಾತನಾಡಿ, ಯೋಗಾಸನ, ಸಂಗೀತ, ನೃತ್ಯ, ಕರಾಟೆ, ಭರತನಾಟ್ಯ ವಚನ ನೃತ್ಯ. ಈಜು. ಕುದುರೆ ಸವಾರಿ ಮುಂತಾದ ವಿಷಯ ಹಾಗು ಸ್ಪರ್ಧೆಗಳಲ್ಲಿ ಎರಡು ನೂರು ವಿದ್ಯಾರ್ಥಿ ಶಿಬಿರಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ್ದು ಆನಂದನ್ನುಂಟು ಮಾಡಿದೆ. ಶಿಬಿರಾರ್ಥಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಜವಾಬ್ದಾರಿ ಪಾಲಕರು ಸಹ ಹೊತ್ತುಕೊಳ್ಳಬೇಕು.ಸಹ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಸರ್ವಾಗೀಣ ಪ್ರಗತಿ ಹೊಂದಲು ಸಾಧ್ಯ ಎಂದರು.
ಪ್ರೇಮಾನಂದ ನಾಗರೇಶಿ. ಗೋಪಾಲ ಪವಾರ ವೇದಿಕೆಯ ಮೇಲಿದ್ದರು.
ತರಬೇತಿ ಶಿಕ್ಷಕರಾದ ಶಿವು ಬೇವನೂರ. ಪ್ರಶಾಂತ ಹಾರವಾಳ. ಕೀರ್ತಿ ಹಂಜಿ. ಸವಿತಾ ತೋಟದ. ಬಿಲಾಲ ಹಿರಾಣಿ. ಅನೀಸ ಮಾಸ್ಟರ. ಮನೋಜ ಪೆÇೀಳ ಸ್ನೇಹಾ ಮಾನೆ. ಅರುಣ ಜಿ. ಉದಯ ಜಿ. ಮುಂತಾದವರು ಉಪಸ್ಥಿತರಿದ್ದರು.