ಸಚಿವ ನಾಗೇಂದ್ರ ರಾಜೀನಾಮೆ ಅವಶ್ಯವಿಲ್ಲಬಳ್ಳಾರಿ ಕಾಂಗ್ರೆಸ್ ಮುಖಂಡರ ಅಭಿಮತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.29: ಸಚಿವ ನಾಗೇಂದ್ರ ಅವರಿಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಹಣದ ಅಕ್ರಮ ವರ್ಗಾವಣೆಗೂ ಸಂಬಂಧವಿಲ್ಲ.  ಬಿಜೆಪಿ ಇದರಿಂದ ರಾಜೀನಾಮೆ ಕೇಳುವ ನೈತಿಕತೆ ಕಳೆದುಕೊಂಡಿದೆ. ಅದಕ್ಕಾಗಿ ಸಚಿವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ   ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮೇಯರ್ ಶ್ವೇತ ಸೋಮಶೇಖರ್, ಮುಖಂಡರಾದ ಎ.ಮಾನಯ್ಯ, ನಗರ ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ್ ಮೊದಲಾದವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿ. ನೀತಿ ಸಂಹಿತಿ ಇರುವುದರಿಂದ ಸಚಿವರು, ನಿಗಮ , ಮಂಡಳಿ ಅಧ್ಯಕ್ಷರು ಸರ್ಕಾರದ ಯಾವುದೇ ಅನುದಾನ ಬಳಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ.
28 ಕೋಟಿ ರೂ ಹಿಂದಕ್ಕೆ ತರುವ ಕೆಲಸ ಆಗಿದೆ.
ಎಂ.ಡಿ ಹೇಳಿದ್ದಾರೆಂದು ಹೇಳಿದೆ. ಸಚಿವರು ಮೌಖಿಕವಾಗಿ ಹೇಳಿದ್ದಾರೆಂಬುದದಕ್ಕೆ ಯಾವುದೇ ಸಾಕ್ಷಿ ಇಲ್ಲ.
ಸಚಿವರು ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಅವರ ಖಾತೆಗೆ ಹಣ ವರ್ಗ ಆಗಿಲ್ಲ. ಬಿಜೆಪಿಯವರ ಕುತಂತ್ರಕ್ಕೆ ಮಣಿಯಬೇಕಿಲ್ಲ.
ಕಳೆದ ಚುನಾವಣೆಯಲ್ಲಿ ಸೋತರಿವ ಶ್ರೀರಾಮುಲು. ಮತ್ತೆ ಎಂ.ಪಿ.ಚುನಾವಣೆಯಲ್ಲೂ  ಸೋಲಲಿದ್ದಾರೆಂದರು.
ಘಟನೆ ಬಗ್ಗೆ ಹೈಕಮಾಂಡಿಗೂ ತಿಳಿಸಿದೆ. ಪ್ರಕರಣವನ್ನು ಸಿಐಡಿಗೆ ನೀಡಿದೆ. ಎಂ.ಡಿ.ಅವರ ಸಹಿ ಸಹ ನಕಲಿ ಎನ್ನಲಾಗುತ್ತಿದೆ. ತಪ್ಪು ಮಾಡಿದ ಆರು ಜನರ ಮೇಲೆ ದೂರು ದಾಖಲಿಸಿದೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಲಿದೆಂದರು.
ಸಚಿವ ನಾಗೇಂದ್ರ ಅವರು ಸ್ವತಃ ವರ್ಗಾವಣೆ ಆಗಿರುವ ಹಣವನ್ನು ನಿಗಮಕ್ಕೆ ಹಿಂದಕ್ಕೆ ತರಿಸುವ ಪ್ರಯತ್ನ ನಡೆಸಿದ್ದಾರೆ. ಇನ್ನು ಮೂರು ನಾಲ್ಕು ದಿನದಲ್ಲಿ ಇದರಲ್ಲಿ ಯಾರು, ಯಾರು ತಪ್ಪು ಮಾಡಿದ್ದಾರೆಂಬುದನ್ನು ಹೊರ ಬರಲಿದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಬಗರ ಹುಕುಂ ಸಾಗುವಳಿ ಸಕ್ರಮ ಸಮಿತಿಯ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ತಿಮ್ಮನಗೌಡ,   ಹುಮಾಯೂನ್ ಖಾನ, ವೆಂಕಟೇಶ್ ಹೆಗಡೆ, ಕೆ.ವನ್ನಪ್ಪ,  ಜಾನೆಕುಂಟೆ ಬಸವರಾಜ್(ಕುಮ್ಮಿ), ಸಂಗನಕಲ್ಲು ವಿಜಯಕುಮಾರ್, ಗೋನಾಳ್ ನಾಗಭೂಷಣಗೌಡ, ಪಿ.ಜಗನ್ನಾಥ, ಅಭಿಲಾಶ್, ಪಾಲಿಕೆ ಸದಸ್ಯರಾದ ಎಂ.ರಾಮಾಂಜಿನೇಯಲು,  ಮೊದಲಾದವರು ಇದ್ದರು.