ವಸತಿ ಪ್ರದೇಶದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಆರಂಭ ಬೇಡ.
ಸಂಜೆವಾಣಿ ವಾರ್ತೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.29 : ಹೊಸಪೇಟೆಯ ಜನನಿಬಿಡ ಪ್ರದೇಶವಾದ ಬಸವೇಶ್ವರ ಬಡಾವಣೆಯ ಹಳೆ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಲು ಅವಕಾಶ ನೀಡಬಾರದು ಎಂದು ಬಸವೇಶ್ವರ ಬಡಾವಣೆ ಕಲ್ಯಾಣ ಸಂಘ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು ಜನ ವಸತಿ ಪ್ರದೇಶದಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸುವುದು ಸರಿಯಾದ ಕ್ರಮವಲ್ಲಾ ಹೀಗಾಗಿ ನಗರದ ಹೊರ ಪ್ರದೇಶದಲ್ಲಿ ಅವಕಾಶ ನೀಡಬೇಕು ಜನ ವಸತಿ ಪ್ರದೇಶ ಬೇಡ ಎಂದು ಶಾಸಕರು, ಮಂತ್ರಿಗಳಿಗೂ ಆರೋಗ್ಯ ಸಚಿವರನ್ನು ಸಹ ಆಗ್ರಹಿಸಿ ಮನವಿಯನ್ನು ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ರೇವಣಸಿದ್ಧಪ್ಪ, ಯೋಗಾನಂದ, ಎನ್.ಎಸ್.ರೇವಣಸಿದ್ಧಪ್ಪ, ಬಸಪ್ಪ, ರವಿಕುಮಾರ, ಜಡೆಯಪ್ಪ, ವಿಶ್ವಾರಾಧ್ಯ, ಎಸ್.ವಿ.ಶೆಟ್ಟಿ, ಮಹೇಶ ಹಾಗೂ ಅರವಿಂದ ಕುಲಕರ್ಣಿ ಪಾಲ್ಗೊಂಡಿದ್ದರು.