ಉಡಿ ತುಂಬುವ ಕಾರ್ಯಕ್ರಮ
ನವಲಗುಂದ,ಮೇ29: ಈ ಬಾರಿಯಾದರೂ ಉತ್ತಮ ಮಳೆಯಾಗಲಿ, ಬೆಳೆಗೆ ಯಾವುದೇ ಹಾನಿ ಆಗದೆ ಸಮೃದ್ಧ ಫಸಲು ಬರಲಿ’ ಎಂದು ಪಟ್ಟಣದ ಗ್ರಾಮ ದೇವತೆಯರಿಗೆ ರೈತರು ಸಂಪ್ರದಾಯದಂತೆ ಮಂಗಳವಾರ ಉಡಿ ತುಂಬಿದರು.
ಪಟ್ಟಣದ ದೇಸಾಯಿಪೇಟೆ ಓಣಿಯ ರೈತ ಮಹಿಳೆಯರು ಉಡಿ ಸಾಮಗ್ರಿಗಳನ್ನು ಹೊತ್ತು ಗುರು ಹಿರಿಯರೊಂದಿಗೆ ಭಜನೆ, ಡೊಳ್ಳು ವಾದ್ಯದೊಂದಿಗೆ ಸಾಗಿ ಊರಿನ ಪ್ರಮುಖ ದೇವತೆಗಳಾದ ದ್ಯಾಮವ್ವ ಮತ್ತು ದುರ್ಗವ್ವ, ಹೊರಗಿನ ದುರಗಮ್ಮ, ಲೋಕೂರವ್ವ, ಜಕ್ಕಮ್ಮ, ಅಕ್ಕಮಹಾದೇವಿ ದೇವರಿಗೆ ಉಡಿ ತುಂಬಿದರು.
ನಂತರ ನೀಲಮ್ಮನ ಜಲಾಶಯದಲ್ಲಿ ಹೊಳಿಗಂಗಮ್ಮನಿಗೆ ಉಡಿತುಂಬಿ ಪೂಜೆ ಸಲ್ಲಿಸಿ ಪರಸ್ಪರ ನೀರನ್ನು ಎರಚಿ ಮರಳಿ ಗಂಗೇಬಸವಶ್ವೇರ ದೇವಸ್ಥಾನಕ್ಕೆ ಮಹಾಮಂಗಳಾರತಿಯೊಂದಿಗೆ ಬಂದು ವಾರ ಸಮಾಪ್ತಿ ಗೊಳಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಾಗಪ್ಪ ಸಂಗಟಿ, ಬಸಣ್ಣ ಹರಿವಾಳ, ಮಲ್ಲಯ್ಯ ಗೌರಿಮಠ, ಶಿವಪ್ಪ ಸಂಗಟಿ, ಈರಣ್ಣ ಹರಿವಾಳ, ಶಿವಪುತ್ರಪ್ಪ ಖಂಡಿಬಾಗಿಲ, ಚಂದ್ರು ಬಿರೋಳ್ಳಿ, ಪರಪ್ಪ ಖಂಡಿಬಾಗಿಲ, ನಾಗಪ್ಪ ಬಿಸನಾಳ, ಸಿದ್ದಲಿಂಗಪ್ಪ, ಹರಿವಾಳ, ದೇವೇಂದ್ರಪ್ಪ ಉಪಾಧ್ಯ, ನಾಗಪ್ಪ ಯಳಮಲಿ, ನಿಂಗಪ್ಪ ಕೊಟಗಿ, ಪುರದಪ್ಪ ಬಸಾಪುರ, ದೇವಕ್ಕ ಜಂಬಗಿ, ಚನ್ನಬಸವ್ವ ಕೊಟಗಿ, ಲಕ್ಷ್ಮವ್ವ ಯಳಮಲಿ ಇತರರು ಇದ್ದರು.