ರಾಜ್ಯಮಟ್ಟದ ಖೋ -ಖೋ ರೆಫರಿಗಳ ಕಾರ್ಯಗಾರ

ಸಂಜೆವಾಣಿ ವಾರ್ತೆ
ದಾವಣಗೆರೆ. ಮೇ.೨೯; ಕರ್ನಾಟಕ ಖೋ – ಖೋ ಅಸೋಸಿಯೇಷನ್ (ರಿ.) ಚಾಲೆoಜೆರ್ಸ್ ಸ್ಪೋರ್ಟ್ಸ್ ಕ್ಲಬ್(ರಿ.)  ಸಂಯುಕ್ತಾಶ್ರಯದಲ್ಲಿ  ಆಲ್ ಇಂಡಿಯ ಖೋ ಖೋ ರಿಫ್ರೆ ಪರೀಕ್ಷೆ ಮತ್ತು ಕರ್ನಾಟಕ ರಾಜ್ಯ ಮಟ್ಟದ ಖೋ ಖೋ ರೆಫರಿರ್ಸ್  ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಉದ್ಘಾಟನೆಯನ್ನು ನೇರವೇರಿಸಿದ ಕರ್ನಾಟಕ ರಾಜ್ಯ ಖೋ ಖೋ ಅಸೋಸಿಷನ್ ಅಧ್ಯಕ್ಷರಾದ ಲೋಕೇಶ್ ಮಾತನಾಡಿ ಕ್ರೀಡೆಗಳಲ್ಲಿ  ಯಾವಾಗಲು ಶಿಸ್ತು ಮತ್ತು ಸಮಯ ಪ್ರಜ್ಞೆ ತುಂಬಾ ಮುಖ್ಯ ರೆಫರಿ ಆದ ನೀವು ಕೇವಲ ಪ್ರಮಾಣ ಪತ್ರಕ್ಕೆ ಮಾತ್ರ ಸೀಮಿತರಾಗಬೇಡಿ. ಅದರಿಂದ ನೀವು ಖೋ ಖೋ ನಿಯಮಗಳ ಬಗ್ಗೆ ತಿಳಿದು ಕೊಳ್ಳಲಾಗಲಾರದು. ಆಟದ ನಿಯಮವನ್ನು ತಿಳಿದು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಆಗ ಮಾತ್ರ ನೀವು ನಿಷ್ಠಾವಂತ. ಪ್ರಾಮಾಣಿಕ ತೀರ್ಪುಗಾರರಾಗಲು ಸಾಧ್ಯ. ಕ್ರೀಡಾಪಟುಗಳ ಪರಿಶ್ರಮಕ್ಕೆ ನ್ಯಾಯಯುತ  ಫಲಿತಾಂಶವನ್ನು ನೀಡಿ ಖೋ ಖೋ ಆಟಗಾರರಿಗೆ ಪ್ರೋತ್ಸಾಹ ನೀಡಿ ಎಂದರು.ತೀರ್ಪುಗಾರರು ನಿಖರವಾಗಿ ಪ್ರೋಫೆಷಿನಲ್ ಆಗಿರಬೇಕು ನೀವು ತರಬೇತಿಯನ್ನು ಪಡೆದು ಮನೆಯಲ್ಲೇ ಕೂರಬೇಡಿ ನಿಮ್ಮ ಜವಾಬ್ದಾರಿ ನಿಭಾಯಿಸಿಕೊಂಡು ಸರಿ ತಪ್ಪು ಗಮನಿಸಿ ಮಕ್ಕಳಿಗೆ ಉತ್ತಮ ತರಬೇತಿ ನೀಡಬೇಕು. ಆಟ ಆಡುವವಾಗ ನಿಯಮಗಳ ಬಗ್ಗೆ ತಿಳಿಸಿ, ಪ್ರತಿ ದಿನ ಮಕ್ಕಳಿಗೆ ತರಬೇತಿ ನೀಡಲು ಪ್ರಯತ್ನಿಸಿ  ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಎಸ್ ಕೆ ಕೆ ಎ ಛೇರ್ಮೆನ್ ಪುರುಷೋತ್ತಮ್ ನುಡಿದರು. ನಮ್ಮ ಹಿರಿಯ ಖೋ ಖೋ ಕ್ರೀಡಾ ಪಟಗಳು ಆಟ ಆಡುವಾಗ ಯಾವುದೇ ಫ್ರೆಡ್ ಲೈಟ್ ಇರಲಿಲ್ಲ ಉತ್ತಮ ಸೌಕರ್ಯ ಇರಲಿಲ್ಲ ಆದರೂ ರಾಷ್ಟ್ರ ಮಟ್ಟದ ಆಟಗಾರರಾಗಿ ಸಾಧಿಸಿದ್ದಾರೆ.  ನಿಮಗೆ ಇಗ ಒಳ್ಳೆಯ ತರಬೇತಿ, ಮತ್ತು ಕಾರ್ಯಗಾರ ನೆಡೆಯುತ್ತಿರುವುದರಿಂದ ಉತ್ತಮ ರೆಫರಿಗಳಾಗಿ ಹೊರಹೊಮ್ಮ ಬಹುದಾಗಿದೆ ಎಂದು ಚಾಲೆಂಜರ್ಸ್ ಸ್ಪೋರ್ಟ್ ಕ್ಲಬ್ ನ ಅಧ್ಯಕ್ಷರಾದ ತ್ರಿಲೋಕ್ ಸಿಂಗ್ ಅಧ್ಯಕ್ಷತೆಯ ಭಾಷಣದಲ್ಲಿ ತಿಳಿಸಿದರು.ಅತಿಥಿಗಳಾಗಿ ಮಲ್ಲಿಕಾರ್ಜುನಯ್ಯ, ಪ್ರಶಾಂತ್ ಪಟಾನ್ ಕರ್, ಬಸವರಾಜ್ ಚಿಲಕಾಂತ್ ಮಠ ಸಿದ್ದಲಿಂಗ ಮೂರ್ತಿ, ಶ್ರೀನಿವಾಸ ಕೆ ಸಿ. ಇಟ್ಟಿ ಗುಡಿ ಮತ್ತು ಜಿಲ್ಲಾ ಖೋ ಖೋ ಸಂಸ್ಥೆಯ ಜಿ. ಡಿ.ಎಸ್. ಮೂರ್ತಿ. ಮತ್ತು ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಕು. ಶ್ರೇಯಾ ಪ್ರಾರ್ಥಿಸಿದಳು . ಡಿ ಕೆ ಕೆ ಎ ಕಾರ್ಯದರ್ಶಿ ಜೆ. ರಾಮಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಶೇಖರ್ ನಿರೂಪಸಿದರು. ಡಾ. ವೀರೇಂದ್ರ ವಂದಿಸಿದರು.    .