ದಾದಿಯರು ಆರೋಗ್ಯ ಕ್ಷೇತ್ರದ ಬೆನ್ನೆಲುಬು
ಧಾರವಾಡ,ಮೇ.29: ದಾದಿಯರ ಅದ್ಭುತ ಕೆಲಸವನ್ನು ಗುರುತಿಸುವ ಉದ್ದೇಶದಿಂದ ವಿಶ್ವ ದಾದಿಯರ ದಿನ ಆಚರಿಸಲಾಗುತ್ತದೆ. ರೋಗಿಗಳಿಗೆ ಸಹಾನುಭೂತಿಯ ಆರೈಕೆಯನ್ನು ಒದಗಿಸುವ ನಮರ್ಪಿತ ವೃತ್ತಿಪರರು ಆರೋಗ್ಯ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಧಾರವಾಡ ಶಾಖೆ ಅಧ್ಯಕ್ಷ ಡಾ. ಸತೀಶ ಇರಕಲ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ, ಶ್ರೀಯಾ ಕಾಲೇಜ್ ನರ್ಸಿಂಗ್ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ದಾದಿಯರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಮಾತನಾಡಿ, ದಣಿವರಿಯದೆ ಆರೈಕೆ ಮಾಡುವ ದಾದಿಯರ ಕಾರ್ಯ ಶ್ಲಾಘನೀಯ ಎಂದರು. ಶುಶ್ರೂಷಾಧಿಕಾರಿ ಡೆಲಿಯಾ ಪಿ. ಮಾತನಾಡಿ, ಕನ್ನಡಿಗರು ಭಾರತದಲ್ಲೇ ಇದ್ದು ರೋಗಿಗಳ ಸೇವೆ ಮಾಡಬೇಕು ಎಂದರು. ಶ್ರೀಯಾ ಕಾಲೇಜಿನ ವಿದ್ಯಾರ್ಥಿಗಳು ` ಪ್ಲಾರೆನ್ಸ್ ನೈಟಿಂಗೇಲ್‍ರ ಕಿರುನಾಟಕ ಪ್ರದರ್ಶಿಸಿದರು.
ವಿವಿಧ ಆಸ್ಪತ್ರೆಗಳ ದಾದಿಯರಾದ ಡೆಲಿಮಾ ಪಿ., ಮೋನಿಕಾ ಬಾಮಜ್, ತ್ರಿವೇಣಿ, ಜೆರುಷಾ, ಜಯಶ್ರೀ ಅವರನ್ನು ಸನ್ಮಾನಿಸಲಾಯಿತು. ಡಾ. ಸಪನ್, ಡಾ. ವಾಣಿ ಇರಕಲ್, ಡಾ. ವಾಣಿ ಇರಕಲ್, ಡಾ. ರೋಡಾ ಜೇಸುರಾಜ್, ಇತರರಿದ್ದರು. ಬ್ಯೂಲಾ ನಿರೂಪಿಸಿದರು. ಸುಶ್ಮಿತಾ ಸ್ವಾಗತಿಸಿದರು. ಡಾ. ಕಿರಣ್ ಕುಲಕರ್ಣಿ ವಂದಿಸಿದರು.