ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ :ಗ್ರಾ.ಪಂ. ಅಧ್ಯಕ್ಷೆ ಮಗನ ವಿರುದ್ಧ ಎಫ್‍ಐಆರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.29- ಪಂಚಾಯಿತಿಯಿಂದ ಮನೆ ಕೊಡಿಸುವುದಾಗಿ ಹೇಳಿ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪುತ್ರ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿರುವ ಘಟನೆ ಹನೂರು ತಾಲೂಕಿನ ಪೆÇನ್ನಾ ಚಿಗ್ರಾ.ಪಂ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪುತ್ರ ವೈದೇಶ್, ಬಸಮ್ಮಣ್ಣಿ ಹಾಗೂ ಶಿವಮ್ಮಣ್ಣಿ ಎಂಬವರ ವಿರುದ್ಧ ಮಲೆಮಹದೇಶ್ವರ ಬೆಟ್ಟ ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
25 ವರ್ಷದ ವಿವಾಹಿತೆ ಮನೆಗಾಗಿ ಅರ್ಜಿ ಸಲ್ಲಿಸಿದ್ದರು. ಮನೆ ಕಟ್ಟಿಕೊಡುವ ಆಸೆ ತೋರಿಸಿದ್ದ ವೈದೇಶ್ ತನ್ನ ಮೇಲೆ ಅತ್ಯಾಚಾರ ಎಸಗಿ, ಖಾಸಗಿ ಫೆÇೀಟೋ ಸೆರೆ ಹಿಡಿದಿದ್ದಾನೆ. ಆರೋಪಿಗಳು ಈ ಫೆÇೀಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಮಾಡಿರುವುದಾಗಿ ಸಂತ್ರಸ್ತೆ ಪೆÇಲೀಸರಿಗೆ ದೂರು ನೀಡಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪ್ರತ್ಯೇಕ ಘಟನೆ- ಗುಂಡ್ಲುಪೇಟೆ ಠಾಣೆಯಲ್ಲಿ ಹೈಡ್ರಾಮಾ: ಸಾಮಾಜಿಕ ಜಾಲತಾಣದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಿರುದ್ದ ಅವಾಚ್ಯ ಪದ ಬಳಕೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಕ್ಕೆ ಗುಂಡ್ಲುಪೇಟೆ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆಯಿತು.
ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದ ಮಲ್ಲು ಎಂಬಾತ ಶಾಸಕರ ಬಗ್ಗೆ ಫೇಸ್ ಬುಕ್ ಪೇಜಿನಲ್ಲಿ ಅವಾಚ್ಯ ಪದ ಬಳಸಿದ್ದು, ಇದನ್ನು ವಿರೋಧಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಯ ಬಂಧನಕ್ಕೆ ಠಾಣೆಗೆ ದೂರು ನೀಡಿದ್ದರು. ಪೆÇಲೀಸರು ಆತನನ್ನು ಠಾಣೆಗೆ ಕರೆದು ಕೊಂಡು ಬರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಠಾಣೆಯೆದುರು ಜಮಾಯಿಸಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಪೆÇಲೀಸರು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ವಾಗ್ವಾದ ನಡೆಯಿತು. ಆರೋಪಿಯಿಂದ ತಪೆÇ್ಪಪ್ಪಿಗೆ ಪತ್ರ ಬರೆಸಿಕೊಂಡು ಪೆÇಲೀಸರು ಕಳುಹಿಸಿದ್ದಾರೆ.