ವಿಜೃಂಭಣೆಯ ಮರಗಮ್ಮದೇವಿ ಜಾತ್ರೋತ್ಸವ
ತಾಳಿಕೋಟೆ:ಮೇ.29: ಪಟ್ಟಣದ ಡಾ.ಅಂಬೇಡ್ಕರ ಬಡಾವಣೆಯಲ್ಲಿಯ ಶ್ರೀಮರಗಮ್ಮದೇವಿಯ ಜಾತ್ರೋತ್ಸವವು ದಿ.28 ಮಂಗಳವಾರರಂದು ವಿಜೃಭಂಣೆಯಿಂದ ಜರುಗಿತು.
ಶಕ್ತಿ ದೇವತೆಯಂದು ಹೆಸರು ಪಡೆದ ಶ್ರೀಮರಗಮ್ಮ ದೇವಿಯ ಮಹಾಮೂರ್ತಿಗೆ ನಸುಕಿನಜಾವ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿ ಜರುಗಿತಲ್ಲದೆ ಶ್ರೀಭಾವಸಾರ ಅಂಬಾಭವಾನಿ ಮಂದಿರದಿಂದ ಶ್ರೀ ದೇವಿಯ ರಥೋತ್ಸವವು ಸುಮಗಂಲೆಯರ ಕುಂಭಮೇಳದೊಂದಿಗೆ ಪ್ರಾರಂಭಗೊಂಡಿತು.
ಈ ಶ್ರೀ ದೇವಿಯ ರಥದ ಭವ್ಯಮೆರವಣಿಗೆಯಲ್ಲಿ ಡೊಳ್ಳಿನ ವಾದ್ಯವೈಭವಗಳು ಹಾಗೂ ಕರಡಿಮಜಲು ಒಳಗೊಂಡಂತೆ ವಿವಿಧ ವಾದ್ಯ ವೈಭವಗಳು ಜನಮನ ಸೆಳೆದವು. ಈ ವಾದ್ಯಗಳ ಬಡಿತಕ್ಕೆ ತಕ್ಕಂತೆ ಯುವಕರು ಶ್ರೀ ರಥದ ಮುಂಭಾಗದಲ್ಲಿ ಹೆಜ್ಜೆ ಹಾಕುತ್ತಾ ಭಕ್ತಿಭಾವ ಮೆರೆದಿದ್ದೇನು ಕಡಿಮೆಯೇನಿಲ್ಲ.
ಅಂಸಖ್ಯಾತ ಸುಮಂಗಲೆಯರು ಸಹ ತಲೆಯ ಮೇಲೆ ಕುಂಭಗಳನ್ನು ಹೊತ್ತಿದ್ದಲ್ಲದೇ ಇನ್ನು ಕೆಲವು ಮಹಿಳೆಯರು ಆರತಿಯನ್ನು ಹಿಡಿದು ಶ್ರೀ ದೇವಿಯ ಉತ್ಸವದಲ್ಲಿ ಪಾಲ್ಗೋಂಡು ಭಕ್ತಿಭಾವ ಮೆರೆದರು.
ಶ್ರೀ ಭಾವಸಾರ ಅಂಭಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಈ ಜಾತ್ರೋತ್ಸವದ ಭವ್ಯ ಮೆರವಣಿಗೆಯೂ ಕತ್ರಿ ಬಜಾರ ಮಾರ್ಗವಾಗಿ ಶ್ರೀ ಖಾಸ್ಗತೇಶ್ವರ ಮಠದ ರಸ್ತೆಗುಂಟ ತೆರಳಿ ಡಾ.ಬಿ.ಆರ್.ಅಂಬೇಡ್ಕರ ಬಡಾವಣೆಯಲ್ಲಿಯ ಶ್ರೀ ದೇವಿಯ ಮಹಾಮಂದಿರಕ್ಕೆ ತೆರಳಿ ಶ್ರೀಮರಗಮ್ಮ ದೇವಿಯ ಮಹಾಮೂರ್ತಿಯನ್ನು ಪುರಾತನ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.
ಶ್ರೀ ದೇವಿಯ ಜಾತ್ರೋತ್ಸವವು ಆದಿಕಾಲದಿಂದಲೂ ಪ್ರತಿ ಮೂರು ವರ್ಷಕ್ಕೋಮ್ಮೆ ಜರಗುತ್ತಾ ಸಾಗಿ ಬಂದಿದ್ದು ಇಂಥಹ ಜಾತ್ರಾ ಉತ್ಸವವು ಭಕ್ತರಬೇಕು ಬೆಡಿಕೆಗಳನ್ನು ಇಡೆರಿಸುತ್ತಾ ಸಾಗಿಬಂದ್ದಿದ್ದರಿಂದ ಯಾವುದೇ ಬೇಧಬಾವವಿಲ್ಲದೆ ಡಾ.ಬಿ.ಆರ್.ಅಂಬೇಡ್ಕರವರ ಬಡಾವಣೆಯ ನಾಗರಿಕರು ಹಾಗೂ ಪಟ್ಟಣದ ಗಣ್ಯಮಾನ್ಯರು ಈ ಉತ್ಸವದಲ್ಲಿ ಜಾತಿಭೇದವಿಲ್ಲದೆ ಪಾಲ್ಗೋಂಡು ಭಕ್ತಿಭಾವ ಮೆರೆದು ಶ್ರೀದೇವಿಯ ಮಹಾಪ್ರಸಾದ ಸೇವಿಸಿ ಪುನಿತರಾದರು.